‘ನಿನ್ನ ಲವ್‌ ಮಾಡ್ತೀನಿ, ಹೆಂಡ್ತಿನೂ ಬಿಟ್ಟುಕೊಡ್ತೀನಿ’! ಫ್ಯಾನ್ಸ್‌ ಹಾಡಿಗೆ ಕ್ರಿಕೆಟರ್ ಮುಲ್ಡರ್​ ಕ್ಯೂಟ್ ರಿಯಾಕ್ಷನ್ | Wiaan Mulder Song

Wiaan Mulder Song
ಫ್ಯಾನ್ಸ್‌ ಹಾಡಿಗೆ ಮುಜುಗರಪಟ್ಟುಕೊಂಡ ಕ್ರಿಕೆಟರ್ ಮುಲ್ಡರ್
Published on: 

SA vs AUS: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ 3ನೇ ಟೆಸ್ಟ್ ಪಂದ್ಯದ ವೇಳೆ ಮೈದಾನದಲ್ಲೊಂದು ತಮಾಷೆಯ ಘಟನೆ ನಡೆದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ವೈಯಾನ್ ಮುಲ್ಡರ್ ಅವರನ್ನು ಗುರಿಯಾಗಿಸಿಕೊಂಡು ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಹಾಡಿದ ಹಾಡು ಮತ್ತು ಅದಕ್ಕೆ ಮುಲ್ಡರ್ ನೀಡಿದ ರಿಯಾಕ್ಷನ್ ನೆಟ್ಟಿಗರ ಗಮನ ಸೆಳೆದಿದೆ.

ಪಂದ್ಯದ ವೇಳೆ ಮುಲ್ಡರ್ ಬೌಂಡರಿ ಲೈನ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಈ ವೇಳೆ ಗ್ಯಾಲರಿಯಲ್ಲಿದ್ದ ಅಭಿಮಾನಿಗಳು ಒಟ್ಟಾಗಿ ಸೇರಿ, "ಓಹ್ ವೈಯಾನ್ ಮುಲ್ಡರ್, ನೀನು ನನ್ನ ಜೀವನದ ಪ್ರೀತಿ... ನನ್ನ ಹೆಂಡತಿಯನ್ನೇ ನಿನಗೆ ಬಿಟ್ಟುಕೊಡ್ತೀನಿ..." ಎಂಬ ರೀತಿಯಲ್ಲಿ ತಮಾಷೆಯಾಗಿ ಹಾಗೂ ಅತಿಯಾದ ಅಭಿಮಾನ ವ್ಯಕ್ತಪಡಿಸುವ ಹಾಡನ್ನು ಜೋರಾಗಿ ಹಾಡಲು ಶುರುಮಾಡಿದರು.

ಮುಲ್ಡರ್ ಕೊಟ್ಟ ಕ್ಯೂಟ್ ರಿಯಾಕ್ಷನ್

ಅಭಿಮಾನಿಗಳು ತಮ್ಮ ಹೆಸರನ್ನು ಹಿಡಿದು ಈ ರೀತಿ ವಿಚಿತ್ರವಾಗಿ ಚಾಂಟ್ ಮಾಡುತ್ತಿದ್ದಂತೆ, ಫೀಲ್ಡಿಂಗ್‌ನಲ್ಲಿದ್ದ ಮುಲ್ಡರ್ ಹಿಂತಿರುಗಿ ಪ್ರೇಕ್ಷಕರತ್ತ ನೋಡಿದರು. ಅಭಿಮಾನಿಗಳ ತಮಾಷೆ ಕಂಡು ಕೊಂಚ ಮುಜುಗರಪಟ್ಟುಕೊಂಡ ಮುಲ್ಡರ್, ಸಣ್ಣದಾಗಿ ತಲೆ ಆಟಿಸುತ್ತಾ ಮುಗುಳುನಕ್ಕರು.

ನಂತರ ತಕ್ಷಣವೇ ತಮ್ಮ ಗಮನವನ್ನು ಪಂದ್ಯದತ್ತ ಹರಿಸಿದರು. ಮುಲ್ಡರ್ ಅವರ ಈ ಕ್ಯೂಟ್ ರಿಯಾಕ್ಷನ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕ್ರಿಕೆಟ್ ಪ್ರಿಯರು ಇದನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ.

ಪಂದ್ಯ ಗೆಲ್ಲಿಸಿದ ಹೀರೋ

ಅಂದಹಾಗೆ ಅಭಿಮಾನಿಗಳು ಮುಲ್ಡರ್ ಬಗ್ಗೆ ಈ ಮಟ್ಟಿಗೆ ಹಾಡು ಹಾಡಲು ಪ್ರಮುಖ ಕಾರಣ ಅವರ ಬ್ಯಾಟಿಂಗ್ ಪ್ರದರ್ಶನ. ಆಸ್ಟ್ರೇಲಿಯಾ ವಿರುದ್ಧದ ಈ ಅಂತಿಮ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ನಲ್ಲಿ ಮುಲ್ಡರ್ 221 ಎಸೆತಗಳಲ್ಲಿ 115 ರನ್‌ಗಳ ಭರ್ಜರಿ ಶತಕ ಸಿಡಿಸಿದ್ದರು. ಇವರ ಈ ಅದ್ಭುತ ಆಟದಿಂದಾಗಿ ದಕ್ಷಿಣ ಆಫ್ರಿಕಾ 176 ರನ್‌ಗಳ ಬೃಹತ್ ಗೆಲುವು ಸಾಧಿಸಿ, 3 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ತನ್ನದಾಗಿಸಿಕೊಂಡಿತು.

ಇದನ್ನೂ ಓದಿ: ಬಿಗ್‌ ಬಾಸ್‌ನಿಂದ ಕುಮಾರಿ ಔಟ್: ಅಗ್ನಿಪರೀಕ್ಷೆಯಿಂದ ದೊಡ್ಮನೆವರೆಗಿನ ಜರ್ನಿ ಮುಕ್ತಾಯ? | BBK 13 Elimination

ಅಂತಿಮ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದು ಆಸ್ಟ್ರೇಲಿಯಾವನ್ನು 111 ರನ್‌ಗಳಿಗೆ ಆಲೌಟ್ ಮಾಡಿದ ಸೈಮನ್ ಹಾರ್ಮರ್ 'ಪಂದ್ಯಶ್ರೇಷ್ಠ' ಪ್ರಶಸ್ತಿ ಪಡೆದರೆ, ಮುಲ್ಡರ್ ಅವರ ಈ ಶತಕ ದಕ್ಷಿಣ ಆಫ್ರಿಕಾ ಸರಣಿ ಗೆಲ್ಲಲು ಪ್ರಮುಖ ಅಡಿಪಾಯವಾಗಿತ್ತು.