ಸಿನಿಮಾ ಬಿಟ್ಟು ಹೊರ ಬರ್ತೇನೆ ಹೊರತು.. ನಾನು ಅದನ್ನು ಮಾಡಲ್ಲ: ಅಚ್ಚರಿ ಹೇಳಿಕೆ ಕೊಟ್ಟ ರಶ್ಮಿಕಾ ಮಂದಣ್ಣ! | Cinema

dk - 2025-06-30T194213.531
Published on

Cinema : ನ್ಯಾಷನಲ್​​ ಕ್ರಶ್​ ಎಂದೇ ಚಿಂಬಿತವಾಗಿರುವ ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಅದು ಸಿನಿಮಾದ ಮೂಲಕ ಅಲ್ಲ, ತನ್ನ ವಿಶೇಷ ಹೇಳಿಕೆಯಿಂದ ಎಲ್ಲರ ಮನ ಗೆದ್ದಿದ್ದಾರೆ.

ಹೌದು, ಇತ್ತೀಚಿಗೆ ಲಂಡನ್​​ನಲ್ಲಿ ಆಯೋಜಿಸಿದ್ದ ''ವೀ ದಿ ವುಮೆನ್​​''(We The Women) ಕಾರ್ಯಕ್ರಮದಲ್ಲಿ ರಶ್ಮಿಕಾ ಭಾಗಿಯಾಗಿದ್ದರು. ಅಲ್ಲಿ ಅವರು ತಮ್ಮ ವೃತ್ತಿಜೀವನ, ಆಯ್ಕೆಗಳು ಮತ್ತು ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಮಾತನಾಡಿದರು. ಅತಿಥಿಯಾಗಿ ಮಾತನಾಡಿದ ನಟಿ 'ಅನಿಮಲ್' ಚಿತ್ರದಲ್ಲಿನ ವಿವಾದಾತ್ಮಕ ಪಾತ್ರದಿಂದ ಹಿಡಿದು ಕಲಾವಿದೆಯಾಗಿ ಅವರ ವೈಯಕ್ತಿಕ ಮಿತಿಗಳವರೆಗೆ ಎಲ್ಲದರ ಬಗ್ಗೆ ಮಾತನಾಡಿದರು.

ಧೂಮಪಾನ ಇರುವ ಪಾತ್ರಗಳು ಒಪ್ಪಲ್ಲ

ತೆರೆಯ ಮೇಲೆ ಧೂಮಪಾನ ಮಾಡಲೇಬೇಕಾದ ಪಾತ್ರವನ್ನು ನಾನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ ಎಂದು ರಶ್ಮಿಕಾ ಮಂದಣ್ಣ ಬಹಿರಂಗಪಡಿಸಿದರು.

"ನಾನು ವೈಯಕ್ತಿಕವಾಗಿ ತೆರೆಯ ಮೇಲೆ ಅಥವಾ ನಿಜ ಜೀವನದಲ್ಲಿ ಎಂದಿಗೂ ಧೂಮಪಾನ ಮಾಡುವುದಿಲ್ಲ, ಏಕೆಂದರೆ ನನಗೆ ಧೂಮಪಾನದ ಪರಿಕಲ್ಪನೆ ಇಷ್ಟವಿಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಮತ್ತು ನಾನು ಅದನ್ನು ನನ್ನಲ್ಲೇ ಇಟ್ಟುಕೊಳ್ಳಲು ಇಷ್ಟಪಡುತ್ತೇನೆ. ಯಾರಾದರೂ ಬಂದು ನಾನು ಅದನ್ನು ಮಾಡಬೇಕೇ ಎಂದು ಕೇಳಿದರೆ, ನಾನು ಬಹುಶಃ ಚಿತ್ರದಿಂದ ಹೊರಬರಬೇಕಾಗಿತ್ತು" ಎಂದಿದ್ದಾರೆ.

ಇನ್ನು ರಶ್ಮಿಕಾ ಸಿನಿಮಾ ವಿಚಾರ ಹೇಳುವುದಾದರೆ ಆಯುಷ್ಮಾನ್ ಖುರಾನಾ ಅವರೊಂದಿಗೆ 'ತಮ್ಮ', ಮತ್ತು 'ದಿ ಗರ್ಲ್‌ಫ್ರೆಂಡ್', 'ರೇನ್‌ಬೋ' ಮತ್ತು 'ಪುಷ್ಪ 3' ನಂತಹ ಹಲವಾರು ಚಿತ್ರಗಳನ್ನು ನಟಿಸಲಿದ್ದಾರೆ. ಇನ್ನು ಇತ್ತೀಚೆಗೆ ಧನುಷ್ ಅವರ 'ಕುಬೇರ್' ಚಿತ್ರದಲ್ಲಿ ರಶ್ಮಿಕಾ ಕಾಣಿಸಿಕೊಂಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net