

ಓರ್ವ ಏಕಾಂಗಿ ಮಹಿಳೆ ಮದುವೆ ಮೇಲಿನ ತನ್ನ ಹತಾಶೆಯನ್ನು ಹಂಚಿಕೊಂಡಿದ್ದು, ಕಳೆದ ಐದು ವರ್ಷಗಳಿಂದ ನನ್ನ ಪತಿಯೊಂದಿಗೆ ಸೆಕ್ಸ್ ಮಾಡಿಯೇ ಇಲ್ಲವೆಂದು ಮುಕ್ತವಾಗಿ ಹೇಳಿಕೊಂಡಿದ್ದಾಳೆ.
ಹೇಸರೇಳಲು ಇಚ್ಛಿಸದ ಮಹಿಳೆಯು news.com.au. ವೆಬ್ಸೈಟ್ನ "ರಿಲೇಶನ್ಶಿಪ್ ರೆಹಾಬ್" ಹೆಸರಿನ ಸಲಹಾ ಅಂಕಣದಲ್ಲಿ ತಮ್ಮ ಕರಾಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಮಕ್ಕಳಾದಾಗಿನಿಂದ ನನ್ನ ದೇಹದ ತೂಕ ಹೆಚ್ಚಾಯಿತು. ಇದಾದ ಬಳಿಕ ನನ್ನ ಮೇಲಿನ ಆಕರ್ಷಣೆಯನ್ನು ನನ್ನ ಪತಿ ಕಳೆದುಕೊಂಡನು. ನಾನು ಮತ್ತು ನನ್ನ ಪತಿ 23 ವರ್ಷದಿಂದ ಒಟ್ಟಿಗೆ ಇದ್ದೇವೆ. ನಮಗೆ ಇಬ್ಬರು ಮಕ್ಕಳಿದ್ದಾರೆ. ಐದು ವರ್ಷದಿಂದ ನಾವಿಬ್ಬರು ಒಟ್ಟಿಗೆ ಸೇರಿಲ್ಲ. ಹೀಗಾಗಿ ನಾನು ಅವರನ್ನು ಬಿಟ್ಟು ಹೊರಡಬೇಕೇ? ಎಂದು ಪ್ರಶ್ನಿಸಿದ್ದಾರೆ.
ನಾನು ಅಧಿಕ ತೂಕವನ್ನು ಹೊಂದಿರುವುದಲ್ಲದೇ, ಗೊರಕೆ ಹೊಡೆಯುತ್ತೇನಂತೆ. ಇದರಿಂದ ಅವರ ನಿದ್ರೆಗೆ ಭಂಗವಾಗುತ್ತಂತೆ. ನಿನ್ನ ತೂಕದಿಂದಾಗಿ ನೀನು ರಾತ್ರಿಯಲ್ಲಿ ಸರಿಯಾಗಿ ಉಸಿರಾಡಲು ಸಾಧ್ಯವಿಲ್ಲ ಎಂದು ನನ್ನ ಮೇಲೆ ಪತಿ ಕೋಪಗೊಳ್ಳುತ್ತಾರೆ. ನನ್ನ ಪತಿ ಅವರ ವಯಸ್ಸಿಗೆ ತಕ್ಕ ತೂಕವಿದ್ದಾರೆ. ಆದರೆ, ನಾನು ಸರಾಸರಿ ತೂಕಕ್ಕಿಂತ 12 ರಿಂದ 14 ಕೆ.ಜಿ ಹೆಚ್ಚು ಇದ್ದೇನೆ. ರಾತ್ರಿ ವೇಳೆ ಉಸಿರಾಟದಲ್ಲಿ ತೊಂದರೆ ಆಗುವಂತಹ ಅನುಭವವಾಗಿಲ್ಲ. ನಾನು ಗೊರಕೆ ಹೊಡೆಯುವುದು ಕಮ್ಮಿಯೇ. ಎಲ್ಲ ಸಮಸ್ಯೆಯು ಅವರ ತಲೆಯಲ್ಲೇ ಇದೆ ಎಂದು ಪತಿ ವಿರುದ್ಧ ಮಹಿಳೆ ಅಸಮಾಧಾನ ಹೊರಹಾಕಿದ್ದಾರೆ.
ನಾನು ಅವರನ್ನು ಸ್ಪರ್ಶಿಸಲು ಯತ್ನಿಸಿದರೆ ಎಳೆದಿಡುತ್ತಾರೆ. ತಬ್ಬಿಕೊಳ್ಳಲು ಯತ್ನಿಸಿದರೆ ದೂರ ತಳ್ಳುತ್ತಾರೆ. ಹೀಗಾಗಿ ನಾನು ಏಕಾಂಗಿಯಾಗಿದ್ದೇನೆ. ಯಾರಾದರೂ ಇದಕ್ಕೆ ಪರಿಹಾರ ತಿಳಿಸಿ ಎಂದು ಕೇಳಿಕೊಂಡಿದ್ದಾರೆ.
ಇದಕ್ಕೆ ಕೆಲವರು ತಮ್ಮದೇ ರೀತಿಯಲ್ಲಿ ಸಲಹೆ ನೀಡಿದ್ದು, ಒಳ್ಳೆಯ ಚಿಕಿತ್ಸಕರನ್ನು ಭೇಟಿ ಮಾಡುವುದು ಒಳಿತೆಂದು ಹೇಳಿದ್ದಾರೆ. (ಏಜೆನ್ಸೀಸ್)