

ದಾವಣಗೆರೆ: ಮುಖ್ಯಮಂತ್ರಿ ಯಡಿಯೂರಪ್ಪನವರು ಒತ್ತಡದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಮುಜುಗರ ತರುವ ಕೆಲಸ ಮಾಡುವುದಿಲ್ಲ ಎಂದು ಸಚಿವ ಶ್ರೀರಾಮುಲು ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ತಮಗೆ ಡಿಸಿಎಂ ಆಗುವ ಆಸೆ ಇದೆ ಎಂಬುದನ್ನು ತಿಳಿಸಿದರು. ಅಲ್ಲದೆ ನಾನು ಒತ್ತಾಯಿಸುವಿದಲ್ಲ ಎಂದೂ ಹೇಳಿದರು.
ನನಗೆ ಉಪಮುಖ್ಯಮಂತ್ರಿಯಾಗುವ ಅವಕಾಶ ಮುಂದೆ ಬರುತ್ತದೆ. ಯಡಿಯೂರಪ್ಪ ಕೊಟ್ಟ ಮಾತನ್ನು ಎಂದಿಗೂ ತಪ್ಪಿಸುವುದಿಲ್ಲ. ಹಾಗೇ ವಾಲ್ಮೀಕಿ ಸಮಾಜಕ್ಕೆ ಖಂಡಿತ ನ್ಯಾಯ ಒದಗಿಸುತ್ತಾರೆ ಎಂದರು.
ನಾಳೆ ಮತ್ತು ನಾಡಿದ್ದು ಬಜೆಟ್ ಪೂರ್ವಭಾವಿ ಸಭೆ ಇದೆ. ನಮ್ಮ ಸಲಹೆಗಳನ್ನೂ ಕೊಡುತ್ತೇವೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್)