ಪೊಲೀಸಿಗಾಗಿ ಐ-ಗಾಟ್ ಕರ್ಮಯೋಗಿ ಅಪ್ಲಿಕೇಶನ್

police brifing meet
ಶಿವಮೊಗ್ಗ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ಜಯನಗರ ಠಾಣೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ವಾರದ ಬ್ರೀಫಿಂಗ್ ಸಭೆ ನಡೆಸಿದರು. ಸಂಜೀವ್‌ಕುಮಾರ್, ಜಯನಗರ ಸಿದ್ದೇಗೌಡ ಇದ್ದರು.
Published on

ಶಿವಮೊಗ್ಗ: ಉದ್ಯೋಗ ಆಧಾರಿತ ಕೋರ್ಸ್‌ಗಳು ಲಭ್ಯವಿರುವ ಐ-ಗಾಟ್ ಕರ್ಮಯೋಗಿ ಅಪ್ಲಿಕೇಶನ್ ಅನ್ನು ಪೊಲೀಸ್ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್ ಹೇಳಿದರು.

ತಿಲಕ್‌ನಗರದ ರಾಘವೇಂದ್ರ ಸ್ವಾಮಿ ಮಠದ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸೂಕ್ಷ್ಮ ಸ್ಥಳಗಳು ಹಾಗೂ ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಕಾನೂನು ಸುವ್ಯವಸ್ಥೆಯ ದೃಷ್ಟಿಯಿಂದ ಜಯನಗರ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ವಾರದ ಬ್ರೀಫಿಂಗ್ ಸಭೆ ನಡೆಸಿದ ಅವರು, ಅಪ್ಲಿಕೇಶನ್‌ಗೆ ಲಾಗಿನ್ ಆಗಿ ನಂತರ ಸಂಬಂಧಪಟ್ಟ ಕೋರ್ಸ್‌ಗಳಿಗೆ ನೋಂದಣಿ ಆಗುವುದು ಹಾಗೂ ಕೋರ್ಸ್‌ಗಳು ಮುಗಿದ ನಂತರ ಪ್ರಮಾಣಪತ್ರ ಪಡೆದುಕೊಳ್ಳುವಂತೆ ಸೂಚನೆ ನೀಡಿದರು.

ಅಪ್ಲಿಕೇಶನ್ ಅಳವಡಿಕೆಯಿಂದ ಉತ್ತಮ ಕೌಶಲ ರೂಡಿಸಿಕೊಳ್ಳುವುದು. ಕರ್ತವ್ಯದಲ್ಲಿ ಕೌಶಲ ಅಭಿವೃದ್ಧಿ ಕಂಡುಕೊಳ್ಳುವುದಕ್ಕೆ ಸಾಧ್ಯವಿದೆ. ಅಪ್ಲಿಕೇಶನ್ ಅನ್ನು ಬಳಕೆ ಮಾಡುವಂತೆ ಮೇಲಧಿಕಾರಿಗಳಿಂದ ಆದೇಶ ಬಂದಿದ್ದು ಪ್ರತಿಯೊಬ್ಬರೂ ಪಾಲನೆ ಮಾಡುವ ಜತೆಗೆ ವೃತ್ತಿ ಕೌಶಲವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾದ್ಯಂತ ಮನೆ ಮನೆಗೆ ಪೊಲೀಸ್ ಸೇವೆ ಯಶಸ್ವಿಯಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಉತ್ತಮವಾಗಿ ಕರ್ತವ್ಯ ನಿರ್ವಹಿಸಬೇಕು. ಮನೆ ಮನೆಗೆ ಭೇಟಿ ಸಂದರ್ಭ ಸಾರ್ವಜನಿಕರ ಕುಂದುಕೊರತೆ ಬಗೆಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಸುರಕ್ಷತೆ ದೃಷ್ಟಿಯಿಂದ ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆ ತಿಳಿಸಬೇಕು. ಅಪರಿಚಿತರ ಚಟುವಟಿಕೆ ಅಥವಾ ಓಡಾಟದ ಬಗ್ಗೆ ಮಾಹಿತಿ ಇದ್ದಲ್ಲಿ ಕೂಡಲೇ ಸಮೀಪದ ಪೊಲೀಸ್ ಇಲಾಖೆಗೆ ತಿಳಿಸಲು ಸೂಚಿಸಬೇಕು ಎಂದು ಹೇಳಿದರು. ಡಿವೈಎಸ್‌ಪಿ ಸಂಜೀವ್‌ಕುಮಾರ್, ಜಯನಗರ ಸಿದ್ದೇಗೌಡ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net