ಅತಿಥಿಗಳನ್ನು ರಕ್ಷಿಸುವಲ್ಲಿ ನಾನು ವಿಫಲನಾಗಿದ್ದೇನೆ; ರಾಜ್ಯ ಸ್ಥಾನಮಾನ ಕೇಳುವುದಿಲ್ಲ ಎಂದ ಸಿಎಂ ಒಮರ್ ಅಬ್ದುಲ್ಲಾ | Jammu and kashmir

Jammu & Kashmir
Published on

Jammu and kashmir| ಜಮ್ಮು ಮತ್ತು ಕಾಶ್ಮೀರ ಹಲವು ದಾಳಿಗಳನ್ನು ನೋಡಿದೆ. ಆದರೆ ಕಳೆದ 21 ವರ್ಷದಲ್ಲಿ ನಡೆದ ಅತೀ ದೊಡ್ಡ ದಾಳಿ ಇದಾಗಿದೆ. ಈ ಪರಿಸ್ಥಿತಿ ಮುಂದಿಟ್ಟುಕೊಂಡು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಕೇಳಲ್ಲ ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಕಾಶ್ಮೀರಕ್ಕೆ ಬಂದ ಅತಿಥಿಗಳಿಗೆ ನನ್ನಿಂದ ರಕ್ಷಣೆ ಕೊಡಲು ಸಾಧ್ಯವಾಗಲಿಲ್ಲ. ನಾನು ಮರಣ ಹೊಂದಿದ 26 ಕುಟುಂಬದವರಲ್ಲಿ ಯಾವ ಮುಖದಲ್ಲಿ ಕ್ಷಮ ಕೇಳಲಿ ಗೊತ್ತಿಲ್ಲ, ಇಂತಹ ಪರಿಸ್ಥಿತಿಯಲ್ಲಿ ನಾನು ಕೇಂದ್ರ ಸರ್ಕಾರದ ಬಳಿ ರಾಜ್ಯ ಸ್ಥಾನಮಾನ ಕೇಳುವುದಿಲ್ಲ ಎಂದು ವಿಧಾನಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

ಅತಿಥಿಗಳನ್ನು ರಕ್ಷಿಸುವಲ್ಲಿ ವಿಫಲನಾದೆ

Pahalgam Terror attack

ಪಹಲ್ಗಾಮ್ ದಾಳಿಯ ನಂತರ ಯಾವುದೇ ರಾಜಕೀಯ ಮತ್ತು ರಾಜ್ಯತ್ವ ಇರಬಾರದು ಎಂದು ಮುಖ್ಯಮಂತ್ರಿ ಭಾವನಾತ್ಮಕ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಭದ್ರತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜವಾಬ್ದಾರಿಯಲ್ಲದಿದ್ದರೂ, ಮುಖ್ಯಮಂತ್ರಿ ಮತ್ತು ಪ್ರವಾಸೋದ್ಯಮ ಸಚಿವರಾಗಿ ಪ್ರವಾಸಿಗರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಜವಾಬ್ದಾರಿಯಾಗಿದೆ. ಆದರೆ ಹಾಗೆ ಮಾಡುವಲ್ಲಿ ವಿಫಲರಾಗಿದ್ದೇವೆ ಎಂದು ಅವರು ಹೇಳಿದರು.

ನಾವು ಹಿಂದೆ (ಕೇಂದ್ರ ಸರ್ಕಾರದೊಂದಿಗೆ) ರಾಜ್ಯದ ಸ್ಥಾನಮಾನದ ಬಗ್ಗೆ ಮಾತನಾಡಿದ್ದೇವೆ ಮತ್ತು ಭವಿಷ್ಯದಲ್ಲಿ ನಾವು ಅದರ ಬಗ್ಗೆ ಮಾತನಾಡುವುದನ್ನು ಮುಂದುವರಿಸುತ್ತೇವೆ. ಆದರೆ ಈಗ ಅದರ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ, ಈ ಬಾರಿ ಭಯೋತ್ಪಾದನಾ ಕೃತ್ಯವನ್ನು ಖಂಡಿಸುವುದು ಮತ್ತು ಸಂಬಂಧಿಕರನ್ನು ಕಳೆದುಕೊಂಡ ಕುಟುಂಬಗಳೊಂದಿಗೆ ಒಗ್ಗಟ್ಟನ್ನು ಪ್ರದರ್ಶಿಸುವುದು ಬಿಟ್ಟು ಬೇರೆ ಯಾವುದರಲ್ಲೂ ರಾಜಕೀಯ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.

(ಏಜೆನ್ಸೀಸ್)

ಶೇಕಡಾ 90 ರಷ್ಟು ಜನರು ಸತ್ಯವನ್ನು ಎತ್ತಿಹಿಡಿಯುತ್ತಿದ್ದರೆ, ಶೇಕಡ 10 ರಷ್ಟು ಜನ ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳು ಹರಡುವಿಕೆಯನ್ನು ನಾವು ಸಹಿಸುವುದಿಲ್ಲ, ಇದರಿಂದ ತಕ್ಷಣವೇ ದೂರವಿರಲು ನಾನು ಅವರಿಗೆ ಎಚ್ಚರಿಕೆ ನೀಡುತ್ತೇನೆ ಎಂದು ಅಬ್ದುಲ್ಲಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net