ಅಂತಹ ಚಿತ್ರಗಳನ್ನು ನಾನೊಬ್ಬಳೇ ನೋಡುವುದಿಲ್ಲ! ಯಾರಾದರೂ ಜತೆಗಿರಬೇಕು: ನಿಧಿ ಅಗರ್ವಾಲ್​ | Nidhi Agarwal

ವಿಜಯವಾಣಿ - 2024-12-06T210230.038
Published on

ಆಂಧ್ರಪ್ರದೇಶ: ಇಂದು ತೆಲುಗು ಚಿತ್ರರಂಗದ ಗ್ಲಾಮರಸ್​​ ಹಾಗೂ ಹಾಟೆಸ್ಟ್ ನಟಿಯರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನಟಿ ನಿಧಿ ಅಗರ್ವಾಲ್ (Nidhi Agarwal), ನಟನೆಗಿಂತ ತಮ್ಮ ಬೋಲ್ಡ್​ ಹೇಳಿಕೆಗಳಿಂದಲೇ ಆಗಾಗ್ಗೆ ಜಾಲತಾಣಗಳಲ್ಲಿ ಸುದ್ದಿಯಾಗುತ್ತಿರುತ್ತಾರೆ. ಸಾಲು ಸಾಲು ಚಿತ್ರಗಳಲ್ಲಿ ಆಫರ್​ ಗಿಟ್ಟಿಸಿಕೊಂಡು ಅಭಿನಯಿಸಿದ್ದೇ ಆದರೂ ಸಿನಿಪ್ರೇಕ್ಷಕರ ಎದುರು ನಟಿ ಅಭಿನಯದ ಚಿತ್ರಗಳು ಕಮಾಲ್ ಮಾಡುತ್ತಿಲ್ಲ ಎಂಬುದು ಸದ್ಯ ಬೇಸರದ ಸಂಗತಿ. ಇದೆಲ್ಲದರ ಮಧ್ಯೆ ಇದೀಗ ಮತ್ತೊಮ್ಮೆ ಸುದ್ದಿಗೆ ಬಂದಿರುವ ನಿಧಿ, ನನಗೆ ಈ ರೀತಿಯ ಚಿತ್ರಗಳನ್ನು ನೋಡಲು ಒಬ್ಬಳೇ ನೋಡುವುದು ಕಷ್ಟ. ಯಾರಾದರೂ ಜತೆಗೆ ಇರಲೇಬೇಕು ಎಂದು ಹೇಳಿದ್ದಾರೆ.

ಪ್ರಸ್ತುತ ಟಾಲಿವುಡ್​ನ ರೆಬೆಲ್​ ಸ್ಟಾರ್​ ಪ್ರಭಾಸ್​ ನಟನೆಯ 'ರಾಜಾ ಸಾಬ್​' ಮತ್ತು ಪವರ್​ ಸ್ಟಾರ್​ ಪವನ್​ ಕಲ್ಯಾಣ್​ ಅಭಿನಯದ 'ಹರಿ ಹರ ವೀರಮಲ್ಲು' ಚಿತ್ರಗಳ ಚಿತ್ರೀಕರಣದಲ್ಲಿ ಸಖತ್ ಬಿಜಿಯಾಗಿರುವ ನಿಧಿ, ಸಿನಿಮಾ ಕೆಲಸಗಳಿಂದ ಕೊಂಚ ಬಿಡುವು ಮಾಡಿಕೊಂಡು ತಮ್ಮ ಅಭಿಮಾನಿಗಳ ಜತೆ ಜಾಲತಾಣದಲ್ಲಿ ಸಮಯ ಕಳೆದಿದ್ದಾರೆ. ನಿಮಗೆ ಕೇಳಬೇಕು ಅನಿಸಿದ ಪ್ರಶ್ನೆಗಳನ್ನು ನೇರವಾಗಿ ಕೇಳಿ ಎಂದಿದ್ದರು. ಈ ಸಂದರ್ಭದಲ್ಲಿ ನೆಟ್ಟಿಗರ ಹಲವು ಪ್ರಶ್ನೆಗಳಿಗೆ ನಟಿ ಮುಕ್ತವಾಗಿ ಉತ್ತರಿಸಿದ್ದಾರೆ.

ನಟಿಯ ಪ್ರಶ್ನಾವಳಿಗಳ ಕರೆಗೆ ಪ್ರತಿಕ್ರಿಯಿಸಿದ ಓರ್ವ ಅಭಿಮಾನಿ, ನೀವು ಹಾರರ್​ ಚಿತ್ರಗಳನ್ನು ಒಬ್ಬರೇ ನೋಡ್ತೀರಾ ಎಂದು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರಿಸಿದ ನಿಧಿ, "ಇಲ್ಲ ನನಗೆ ಒಬ್ಬಳೇ ನೋಡುವುದು ಎಂದರೆ ಆಗುವುದಿಲ್ಲ. ಬಹಳ ಭಯವಾಗುತ್ತದೆ. ನನ್ನೊಂದಿಗೆ ಯಾರಾದರೂ ಇದ್ದಾರೆ ಮಾತ್ರ ಅಂತಹ ಚಿತ್ರಗಳನ್ನು ನೋಡಲು ಸಾಧ್ಯ" ಎಂದು ಹೇಳಿದ್ದಾರೆ. ಕಳೆದ ಸಿನಿಮಾಗಳಲ್ಲಿ ಅಷ್ಟಾಗಿ ಸದ್ದು ಮಾಡದ ನಿಧಿ ಅರ್ಗವಾಲ್ ಮುಂಬರುವ​ ಬಹುನಿರೀಕ್ಷಿತ ಚಿತ್ರಗಳಲ್ಲಿ ಯಶಸ್ಸು ಕಾಣಲಿದ್ದಾರಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net