ತುಮಕೂರಿಗೆ ಆಗಮಿಸುತ್ತಿರುವುದು ನನಗೆ ತುಂಬಾ ಸಂತೋಷವಾಗಿದೆ ಎಂದು ಕನ್ನಡದಲ್ಲಿ ಭಾಷಣ ಆರಂಭಸಿದ ಮೋದಿ

Narendra Modi
Published on

ತುಮಕೂರು: ನಾನು ತುಮಕೂರಿಗೆ ಆಗಮಿಸಿರುವುದು ಸಂತೋಷವಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಮಠ ಎಲ್ಲರ ಜೀವನದಲ್ಲಿ ಮಂಗಳ ತಂದಿದೆ. ಬಹಳ ವರ್ಷದ ನಂತರ ಆಗಮಿಸಿದ್ದೇನೆ. ಸಮಾಜದ ಸುಧಾರಣೆಯಲ್ಲಿ ಮಠದ ಪಾತ್ರ ದೊಡ್ಡದಿದೆ ಎಂದು ಅವರು ನುಡಿದರು.
ಇದಕ್ಕೂ ಮೊದಲು ಅವರು ಶ್ರೀಸಿದ್ದಗಂಗಾ ಮಠದ ಆವರಣದಲ್ಲಿ ಇರುವ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ದರ್ಶನ ಮಾಡಿದರು.

ಗದ್ದುಗೆ ದರ್ಶನಕ್ಕೆ ತೆರಳುವ ವೇಳೆ ಅವರು ವಿದ್ಯಾರ್ಥಿಗಳತ್ತ ಕೈಬೀಸಿದರು. ಗದ್ದುಗೆ ದರ್ಶನ ಮಾಡಿದ ನಂತರ ಅವರು ನೇರವಾಗಿ ವೇದಿಕೆ ಆಗಮಿಸಿದರು. ಶ್ರೀಸಿದ್ದಲಿಂಗ ಸ್ವಾಮೀಜಿ ಅವರು ಮೋದಿ ಅವರಿಗೆ ಶಿವಕುಮಾರ ಸ್ವಾಮೀಜಿ ಅವರ ಬೆಳ್ಳಿ ವಿಗ್ರಹವನ್ನು ನೀಡಿ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

ಕೇಂದ್ರ ಸಚಿವ ಸದಾನಂದಗೌಡ, ಸುರೇಶ್​ ಅಂಗಡಿ, ಬಿಜೆಪಿ ಅಧ್ಯಕ್ಷ ನಳೀನ್​ ಕುಮಾರ್​ ಕಟೀಲು ಸೇರಿದಂತೆ ಹಲವು ಗಣ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net