

ಇದು ಕಾರು ಶೋರೂಂ- ಶ್ವಾನದ ಬಾಂಧವ್ಯಗಾಥೆ...! ಕಂಪನಿಯ ಸಿಬ್ಬಂದಿಯಾಗಿ ಸ್ಥಾನ ಪಡೆದ ರೋಚಕ ಕಹಾನಿ.
ಕರೊನಾ ಸಮಯದಲ್ಲಿ ಉದ್ಯೋಗ ಉಳಿಸಿಕೊಳ್ಳುವುದು ಸವಾಲಾಗಿ ಪರಿಣಮಿಸಿದೆ. ಅಂಥದ್ದರಲ್ಲಿ, ಶ್ವಾನವೊಂದು ಉದ್ಯೋಗ ಗಿಟ್ಟಿಸಿಕೊಂಡಿದೆ ಎಂದರೆ ಅಚ್ಚರಿಯೇ ಸರಿ.
ಹೌದು... ಇದು ಕಾರು ಶೋ ರೂಂ ಹಾಗೂ ಕಾರು ಶೋರೂಮ್ನ ಬಾಂಧವ್ಯಗಾಥೆ. ಬ್ರೆಜಿಲ್ನ ಎಸ್ಪಿರೆಟೋ ಸ್ಯಾಂಟೋದ ಸೆರ್ರಾ ಎಂಬಲ್ಲಿರುವ ಹುಂಡೈ ಕಾರು ಶೋರೂಮ್ ತನ್ನ ಪ್ರಾಣಿಪ್ರೇಮಕ್ಕೆ ಭಾರಿ ಮೆಚ್ಚುಗೆ ಪಡೆದಿದೆ.
ಸದಾ ಶೋರೂಂ ಸುತ್ತಲೂ ಠಳಾಯಿಸುತ್ತಿದ್ದ ಬೀದಿನಾಯಿಯನ್ನು ದತ್ತು ಪಡೆದಿದ್ದಲ್ಲದೇ, ಅದಕ್ಕೆ ಟಸ್ಕಾನ್ ಪ್ರೈಮ್ ಎಂಬ ಹೆಸರನ್ನು ನೀಡಿದ್ದರೆ, ಅಷ್ಟೇ ಆಗಿದ್ದರೆ, ವಿಶೇಷ ಇರುತ್ತಿರಲಿಲ್ಲವೇನೋ? ಅದಕ್ಕೆ ಶೋರೂಮ್ನಲ್ಲಿ ಉದ್ಯೋಗ ಕಲ್ಪಿಸಿದ್ದಾರೆ. ಕಾರಿನ ಸೇಲ್ಸ್ಮನ್ ಹುದ್ದೆಯನ್ನೂ ನೀಡಿದ್ದಾರೆ. ಐಡಿ ಕಾರ್ಡ್ಅನ್ನೂ ಅದರ ಕೊರಳಿಗೆ ನೇತು ಹಾಕಿದ್ದಾರೆ.
ಶ್ವಾನ ಶೋರೂಮ್ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಕಂಪನಿಯವರು ಹೇಳಿಕೊಂಡಿದ್ದಾರೆ. ಅದೇನೇ ಇರಲಿ, ಇವರ ಪ್ರಾಣಿಪ್ರೀತಿಗೆ ನೆಟ್ಟಿಗರಂತೂ ಭಾರಿ ಫಿದಾ ಆಗಿದ್ದಾರೆ. ಅತ್ಯಂತ ಮಾನವೀಯ ನಡೆಯಿದು ಎಂದು ಶ್ಲಾಘಿಸಿದ್ದಾರೆ.