ಲಕ್ಕಿ ಡ್ರಾನಲ್ಲಿ ಒಲಿದ ಅದೃಷ್ಟ; 2 ಕೋಟಿ ರೂಪಾಯಿ ಹಣ ಗೆದ್ದ ಮಹಿಳೆ

Hyderabadi woman
Published on

ಹೈದರಾಬಾದ್: ಲಕ್ಕಿ ಡ್ರಾ ಎಂದರೆ ಅದೃಷ್ಟವಂತರಿಗೆ ಮಾತ್ರ ಒಳಿದು ಬರುತ್ತದೆ. ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ನೆಲೆಸಿರುವ ಹೈದರಾಬಾದ್ ಮಹಿಳೆಗೆ ಲಾಟರಿ ಮೂಲಕ 2 ಕೋಟಿ ರೂಪಾಯಿ ಹಣ ಸಿಕ್ಕಿದೆ.

ಯುಎಇ ಮೂಲದ ಮಹ್ಝೂಝ್ ಡ್ರಾ ಆಯೋಜಿಸಿದ್ದ ಲಾಟರಿಯಲ್ಲಿ ಹಮೇದಾ ಬೇಗಂ ಹಣ ಗೆದ್ದಿರುವ ಮಹಿಳೆಯಾಗಿದ್ದಾರೆ. ಲಾಟರಿಯ ಲಕ್ಕಿ ಡ್ರಾನಲ್ಲಿ ಅವರು 1 ಮಿಲಿಯನ್ ದಿರ್ಹಮ್ ಹಣ ಗಳಿಸಿದ್ದಾರೆ. ಅಂದರೆ 2, 22, 28,303 ರೂಪಾಯಿ ಗೆದ್ದಿದ್ದಾರೆ. ಏಪ್ರಿಲ್ 1 ರಂದು ನಡೆದ 122 ನೇ ಸಾಪ್ತಾಹಿಕ ಮಹ್ಝೂಜ್ ಡ್ರಾದಲ್ಲಿ ಆರು ವಿಜೇತ ಸಂಖ್ಯೆಗಳಲ್ಲಿ ಹಮೇದಾ ಬೇಗಂರ ಐದು ಸಂಖ್ಯೆ ಹೊಂದಿಕೆಯಾಯಿತು.

ಹಮೇದಾ ಬೇಗಂ ಅವರು ಕಳೆದ ಮೂರು ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ ನ ರಾಜಧಾನಿ ಅಬುಧಾಬಿಯಲ್ಲಿ ನೆಲೆಸಿದ್ದಾರೆ. ವೈದ್ಯಕೀಯ ಕೋಡರ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಮೇದಾ ತನ್ನ ಟಿಕೆಟ್‌ಗೆ ಪ್ರಥಮ ಬಹುಮಾನ ಬಂದಿರುವುದನ್ನು ಕೇಳಿದ ನಂತರ ತನ್ನ ಸಂಪಾದನೆಯನ್ನು ತನ್ನ ಕುಟುಂಬದ ಭವಿಷ್ಯಕ್ಕಾಗಿ ಮತ್ತು ತನ್ನ ನಾಲ್ಕು ಮಕ್ಕಳ ಶಿಕ್ಷಣಕ್ಕಾಗಿ ಬಳಸಿಕೊಳ್ಳುವುದಾಗಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net