ಅಸ್ತಮಾ ನಿವಾರಣೆಗೆ ಮೀನಿನ ಪ್ರಸಾದ; ಬಥಿನಿ ಕುಟುಂಬದಿಂದ ವಿತರಣೆ

fish
Published on

ಹೈದರಾಬಾದ್​​: ಮೀನು ಪ್ರಸಾದ ಹೈದರಾಬಾದ್​ನಲ್ಲಿ ಸಖತ್​ ಫೇಮಸ್​ ಆಗಿದೆ. ಬಥಿನಿ ಕುಟುಂಬ ನೀಡುವ ನಾಟಿ ಮಿಶ್ರಿತ ಮೀನು ಸೇವನೆಯಿಂದ ಅಸ್ತಮಾ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ. ಇದಕ್ಕಾಗಿ ದೇಶ ವಿದೇಶದ ಜನರು ಕೂಡ ಮುಗಿ ಬೀಳುತ್ತಾರೆ. ಈ ಪ್ರಸಾದ ವಿತರಣೆ ನಡೆಯುತ್ತಿದೆ.

ಮೀನು ಪ್ರಸಾದ ಅನೇಕ ಅಸ್ತಮಾ ರೋಗಿಗಳು ಮಹಾ ಪ್ರಸಾದದಂತೆ ಸ್ವೀಕರಿಸುವ ಔಷಧವಿದು. ಈ ಪ್ರಸಾದಕ್ಕಾಗಿ ಉತ್ತರದ ರಾಜ್ಯಗಳ ರೋಗಿಗಳು ಕೂಡ ಹೈದರಾಬಾದ್‌ಗೆ ಬಹಳ ನಂಬಿಕೆಯಿಂದ ಬರುತ್ತಾರೆ. ಈ ಪ್ರಸಾದ ಹೇಗೆ ಕೆಲಸ ಮಾಡುತ್ತದೆ ಎನ್ನುವುದು ಇನ್ನು ಕೆಲವು ಅನುಮಾಗಳು ಈ ಕುರಿತಾಗಿದೆ. ಆದರೂ ಈ ಪ್ರಸಾದಕ್ಕಾಗಿ ಬರುವ ಆಸ್ತಮಾ ರೋಗಿಗಳ ಸಂಖ್ಯೆ ಏರುತ್ತಲೇ ಇದೆ. ಔಷಧಿಯೋ.. ಪ್ರಸಾದವೋ? ಎಂಬ ಚರ್ಚೆ ಮೊದಲಿನಿಂದಲೂ ಇದೆ.

ಮೀನು ಪ್ರಸಾದ ವಿತರಣೆ ಬಗ್ಗೆ ಮೊದಲಿನಿಂದಲೂ ಜನ ವಿಜ್ಞಾನ ವೇದಿಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಯಾವುದೇ ವೈಜ್ಞಾನಿಕ ದೃಢೀಕರಣವಿಲ್ಲದೆ ಅಕ್ರಮವಾಗಿ ಮೀನು ಪ್ರಸಾದ ವಿತರಿಸಲಾಗುತ್ತಿದೆ ಎಂಬುದು ಅವರ ಆರೋಪ. 2013ರಲ್ಲಿ ಜನ ವಿಜ್ಞಾನ ವೇದಿಕೆ ಹೈಕೋರ್ಟ್‌ ಮೆಟ್ಟಿಲೇರಿತ್ತು. ಈ ಔಷಧಿಯಿಂದ ಯಾವುದೇ ಹಾನಿಗಳಿವೆಯೇ ಎಂಬ ಬಗ್ಗೆ ಹೈಕೋರ್ಟ್‌ ಯಾವುದೇ ತೀರ್ಮಾನಕ್ಕೆ ಬರಲಿಲ್ಲ. ಇದರೊಂದಿಗೆ ಇದನ್ನು ‘ಔಷಧ’ ಎಂದು ಕರೆಯಬಾರದು ಎಂದು ಹೈಕೋರ್ಟ್ ಆದೇಶಿಸಿದೆ. ಆದರೆ ‘ಪ್ರಸಾದ’ ಹೆಸರಿನಲ್ಲಿ ಸಹೋದರರು ಹಂಚುತ್ತಿದ್ದಾರೆ.

ಕೊರಮೀನು ಮೀನಿನ ಬಾಯಿಗೆ ಅರಿಶಿನದ ಪೇಸ್ಟ್ ಹಾಕಿ ಜನರ ಬಾಯಿಗೆ ಹಾಕಿದರೆ ರೋಗ ವಾಸಿಯಾಗುತ್ತದೆ ಎಂದು ನಂಬುವುದಾದರೂ ಹೇಗೆ? ಜೀವಂತ ಮೀನನ್ನು ಬಾಯಿಗೆ ಹಾಕಿಕೊಳ್ಳುವಾಗ ಏನಾದರೂ ತೊಂದರೆ ಎದುರಾದರೆ?  ಮೀನಿನ ಪ್ರಸಾದ ಸೇವನೆಯಿಂದ ಅಸ್ತಮಾ ವಾಸಿಯಾಗುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ಮೀನಿನ ಪ್ರಸಾದ ವಿಚಾರವಾಗಿ ನ್ಯಾಯಾಲಯದ ಮೊರೆ ಹೋಗುತ್ತೇವೆ ಎಂಬುದು ವಿಚಾರವಾದಿಗಳ ವಾದವಾಗಿದೆ. ಆದರೆ ಈ ವಿವಾದಗಳ ನಡುವೆಯೂ ಮೀನಿನ ಪ್ರಸಾದ ವಿತರಣೆ ನಡೆಯುತ್ತಿದೆ.

ಪ್ರತಿವರ್ಷ ಮೃಗಶಿರ ಕಾರ್ತಿಕ ಹಬ್ಬದಂದು ಬಥಿನಿ ಕುಟುಂಬ ನೀಡುವ ಮೀನು ಪ್ರಸಾದ ವಿತರಣೆಗೆ ಸಲಕ ಸಿದ್ಧತೆ ಮಾಡಲಾಗುತ್ತದೆ. ಜೂನ್ 9,10 ರಂದು ಎರಡು ದಿನಗಳ ಈ ಕಾರ್ಯಕ್ರಮದಲ್ಲಿ ಸುಮಾರು 5 ಲಕ್ಷ ಜನರಿಗೆ 5 ಕ್ವಿಂಟಾಲ್​​​ ಪ್ರಸಾದ ವಿತರಣೆ ಆಗಲಿವೆ. ಮೀನುಗಾರಿಕೆ ಇಲಾಖೆ ಈಗಾಗಲೇ 2.5 ಲಕ್ಷ ಕೊರಮೀನು ಸಿದ್ಧಪಡಿಸಿದೆ. ಇಲ್ಲಿ ಸಸ್ಯಹಾರಿಗಳಿಗೂ ಬೆಲ್ಲದ ಮೂಲಕ ಮೀನಿನ ಪ್ರಸಾದ ನೀಡಲಾಗುತ್ತದೆ.

ಹೈದರಾಬಾದ್ ಟ್ರಾಫಿಕ್ ಪೊಲೀಸರು ಗುರುವಾರ ಸಂಜೆ 6 ರಿಂದ ಶನಿವಾರ ಮಧ್ಯರಾತ್ರಿಯವರೆಗೆ ನಾಂಪಲ್ಲಿಯ ನುಮಾಯಿಶ್ ಮೈದಾನದಲ್ಲಿ ಮೀನು ಪ್ರಸಾದ ವಿತರಣೆಗೆ ಸಂಬಂಧಿಸಿದಂತೆ ಸಂಚಾರ ನಿರ್ಬಂಧಗಳನ್ನು ಘೋಷಿಸಿದ್ದಾರೆ. ಕಾರ್​, ಬಸ್​​, ಬೈಕ್​ನಲ್ಲಿ ಬರುವವರಿಗೆ ಬೇರೆ ಬೇರೆ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರು, ವೃದ್ಧರು ಮತ್ತು ಮಹಿಳೆಯರಿಗೆ ವಿಶೇಷ ಸರತಿ ಸಾಲುಗಳು ಮತ್ತು ಕೌಂಟರ್‌ಗಳಿವೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಮೂರು ವರ್ಷಗಳ ವಿರಾಮದ ನಂತರ ಪ್ರಸಾದ ವಿತರಣೆ ನಡೆಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net