ರೀಲ್ಸ್​ ಮಾಡಲು ಹೋಗಿ ಕಾಲು ಜಾರಿ ನೀರಿಗೆ ಬಿದ್ದು ಪ್ರಾಣ ಬಿಟ್ಟ ಯುವಕ! Instagram reels

death jaipura
Published on

Instagram reels : ಹೈದರಾಬಾದ್: ಇನ್‌ಸ್ಟಾಗ್ರಾಮ್​ಗಾಗಿ ರೀಲ್ಸ್​​ ಮಾಡುತ್ತಿದ್ದಾಗ ವಿದ್ಯಾರ್ಥಿ ಕ್ವಾರಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಶಂಶಾಬಾದ್‌ನ ಮಾನಸ ಬೆಟ್ಟದಲ್ಲಿರುವ ಕ್ವಾರಿಯಲ್ಲಿ ಭಾನುವಾರ ಈ ಘಟನೆ ನಡೆದಿದೆ.

ಬೋರಬಂಡಾ ಪ್ರದೇಶದ 17 ವರ್ಷದ ಮಿರ್ಜಾ ಶೋಯೆಬ್ ಬೇಗ್ ಭಾನುವಾರ ತನ್ನ ಸ್ನೇಹಿತರೊಂದಿಗೆ ಮಾನ್ಸಾ ಹಿಲ್ಸ್ ಬಳಿಯ ಕ್ವಾರಿಗಳಿಗೆ ಹೋಗಿದ್ದ. ಅಲ್ಲಿ ಇನ್‌ಸ್ಟಾಗ್ರಾಮ್ ರೀಲ್‌ಗಳಿಗಾಗಿ ವೀಡಿಯೊ ಚಿತ್ರೀಕರಣ ಮಾಡುವಾಗ, ಶೋಯೆಬ್ ಎಡವಿ ನೀರಿಗೆ ಬಿದ್ದಿದ್ದಾನೆ.

ಮಾಹಿತಿ ತಿಳಿದ ತಕ್ಷಣ, ಆರ್‌ಜಿಐ ವಿಮಾನ ನಿಲ್ದಾಣ ಪೊಲೀಸರು, ಅಗ್ನಿಶಾಮಕ ಇಲಾಖೆ ಮತ್ತು ಡಿಆರ್‌ಎಫ್ ತಂಡಗಳು ಸ್ಥಳಕ್ಕೆ ತಲುಪಿ ಶೋಯೆಬ್ ಅವರನ್ನು ರಕ್ಷಿಸಲು ಪ್ರಯತ್ನಿಸಿದವು. ಆದರೆ, ಅವರ ಪ್ರಯತ್ನಗಳು ವ್ಯರ್ಥವಾಯಿತು. ಸ್ವಲ್ಪ ಸಮಯದ ನಂತರ, ಶೋಯೆಬ್ ಅವರ ದೇಹವನ್ನು ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಮೃತ ಶೋಯೆಬ್ ಪೋಷಕರು ಕಣ್ಣೀರು ಹಾಕುತ್ತಾ ಮಾತನಾಡಿ, ಮಗ ಮಾನ್ಸಾ ಬೆಟ್ಟಗಳಿಗೆ ಹೋಗುತ್ತಿದ್ದಾನೆಂದು ತಿಳಿದಿರಲಿಲ್ಲ. ಅವನು ಆಟವಾಡಲು ಹೊರಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.

ದೊಡ್ಡವನಾದ ಮೇಲೆ ತಮ್ಮ ಆಸರೆಯಾಗುತ್ತಾನೆ ಎಂದು ಭಾವಿಸಿದ್ದ ಮಗ ನಿರ್ಜೀವವಾಗಿ ಮನೆಗೆ ಬಂದಿದ್ದರಿಂದ ಪೋಷಕರು ಮತ್ತು ಕುಟುಂಬ ಸದಸ್ಯರು ಹೃದಯ ವಿದ್ರಾವಕವಾಗಿ ಕಣ್ಣೀರಿಟ್ಟರು.

ರೀಲ್ಸ್​​ಗಳು ಮಾಡುತ್ತಾ ಲೈಕ್‌ಗಳು ಮತ್ತು ಫಾಲೋವರ್‌ಗಳ ಹುಡುಕಾಟದಲ್ಲಿ ಯುವಕರು ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ರಾತ್ರೋರಾತ್ರಿ ಪ್ರಸಿದ್ಧರಾಗಲು ಯುವಕ, ಯುವತಿಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net