

ಹೈದರಾಬಾದ್: ( meat ) ಒಂಬತ್ತು ಜನರ ಕುಟುಂಬವೊಂದು ರೆಫ್ರಿಜರೇಟರ್ನಲ್ಲಿಟ್ಟಿದ್ದ ಮಾಂಸದ ಆಹಾರವನ್ನು ಸೇವಿಸಿದ ನಂತರ ಇವರಲ್ಲೊಬ್ಬ ಸಾವನ್ನಪ್ಪಿದ್ದಾನೆ. ಇತರ ಮೂವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಹೈದರಾಬಾದ್ನ ವನಸ್ಥಾಲಿಪುರಂನಲ್ಲಿ ನಡೆದಿದೆ.
ಫಲಕ್ನುಮಾ ರಸ್ತೆ ಸಾರಿಗೆ ನಿಗಮದ ಡಿಪೋದಲ್ಲಿ ಕಂಡಕ್ಟರ್ ಆಗಿರುವ 46 ವರ್ಷದ ಶ್ರೀನಿವಾಸ್ ಯಾದವ್, ಭಾನುವಾರ ಬೊನಾಲು ಹಬ್ಬವನ್ನು ತಮ್ಮ ಕುಟುಂಬದೊಂದಿಗೆ ಮತ್ತು ಸಂಬಂಧಿಕರರೊಂದಿಗೆ ಆಚರಿಸಿದ್ದರು. ಈ ವೇಳೆ ಕೋಳಿ, ಮಟನ್ ಮತ್ತು ಬೋಟಿ (ಮೇಕೆ ಕರುಳು) ಬೇಯಿಸಿದ್ದರು. ಈ ಊಟವನ್ನು ಕುಟುಂಬದ 9 ಮಮಂದಿ ಸದಸ್ಯರು ಕುಳಿತು ಸವಿದಿದ್ದರು. ಉಳಿದಿದ್ದ ಮಾಂಸದ ಖಾದ್ಯವನ್ನು ಫ್ರಿಡ್ಜ್ನಲ್ಲಿಟ್ಟಿದ್ದರು.
ಸೋಮವಾರ, ಕುಟುಂಬವು ಉಳಿದ ಮಾಂಸವನ್ನು ಮತ್ತೆ ಬಿಸಿ ಮಾಡಿ ತಿಂದಿದ್ದಾರೆ. ನಂತರ ಸದಸ್ಯರು ವಾಂತಿ ಮತ್ತು ಅತಿಸಾರದಿಂದ ಕುಟುಂಬದ ಒಂಬತ್ತು ಜನರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಶ್ರೀನಿವಾಸ್ ಯಾದವ್ ಮಂಗಳವಾರ ನಿಧನರಾದರು. ಇತರ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ, ಉಳಿದವರ ಮೇಲೆ ತೀವ್ರ ನಿಗಾ ಇಡಲಾಗಿದೆ.
ವನಸ್ಥಲಿಪುರಂ ಪೊಲೀಸರ ಪ್ರಕಾರ, "ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಪಿಎಂಇ ವರದಿಗಾಗಿ ಕಾಯಲಾಗುತ್ತಿದೆ, ಕುಟುಂಬದ ಎಲ್ಲ ಸದಸ್ಯರು ಚಿಕಿತ್ಸೆ ಪಡೆಯುತ್ತಿರುವುದರಿಂದ, ಅಂತ್ಯಕ್ರಿಯೆ ಸೇರಿದಂತೆ ಔಪಚಾರಿಕ ಕಾರ್ಯಗಳನ್ನು ಮಾಡಬೇಕಾಗಿದೆ. ಪ್ರಾಥಮಿಕ ತನಿಖೆಯಲ್ಲಿ ಆಹಾರ ವಿಷವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಕುಟುಂಬವು ಮೇಕೆ ಮತ್ತು ಕೋಳಿಯಿಂದ ಮಾಡಿದ ಖಾದ್ಯವನ್ನು ಸೇವಿಸಿದ್ದಾರೆ. ಅವರು ಸಂಗ್ರಹಿಸಿದ ಆಹಾರವನ್ನು ಮತ್ತೆ ಬಿಸಿ ಮಾಡಿದ್ದರು. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರೆದಿದೆ.
ಸಂಗ್ರಹಿಸಿದ ಮಾಂಸ ಮತ್ತು ಇತರ ಸೇವಿಸುವಾಗ ಜಾಗರೂಕರಾಗಿರಲು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರನ್ನು ಕೋರಿದ್ದಾರೆ.