ಹೈದರಾಬಾದ್​ ಪಶು ವೈದ್ಯೆ ಅತ್ಯಾಚಾರ, ಕೊಲೆ ಪ್ರಕರಣ ಸಿನಿಮಾ ಮಾಡಲು ಮಾಹಿತಿ ಕಲೆ ಹಾಕಿದ ರಾಮ್​ ಗೋಪಾಲ ವರ್ಮಾ

RGV
Published on

ಹೈದರಾಬಾದ್​: ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ರಾಮ್​ಗೋಪಾಲ ವರ್ಮಾ ಹೈದರಾಬಾದ್​ನ ಏರ್​ಪೊರ್ಟ್​ ಪೊಲೀಸ್​ ಠಾಣೆಗೆ ಭೇಟಿ ನೀಡಿ ಪಶು ವೈದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮಾಹಿತಿ ಪಡೆದರು.

ಪಶು ವ್ಯದ್ಯೆ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಆಧರಿಸಿ ಸಿನಿಮಾವೊಂದನ್ನು ನಿರ್ಮಾಣ ಮಾಡುತ್ತಿದ್ದಾರೆ ರಾಮ್​ಗೋಪಾಲ ವರ್ಮಾ. ಈ ಬಗ್ಗೆ ಮಾಹಿತಿ ನೀಡಿದ ಅವರು, ಶಂಷಾಬಾದ್​ ಎಸಿಪಿ ಅವರನ್ನು ಭೇಟಿಯಾಗಲು ಬಂದಿದ್ದೆ. ಪಶುವೈದ್ಯೆ ಪ್ರಕರಣದ ಮಾಹಿತಿ ಪಡೆದರೆ, ನಿಖರವಾಗಿ ಚಿತ್ರಕಥೆ ಬರೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಕಳೆದ ವರ್ಷ ನವೆಂಬರ್ 28ರಂದು ಪಶುವೈದ್ಯೆಯನ್ನು ಅಪಹರಿಸಿದ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿ ಅಮಾನವೀಯವಾಗಿ ಕೊಲೆಗೈದಿದ್ದರು. ಕೃತ್ಯವನ್ನು ತಿಳಿದು ದೇಶವೇ ಬೆಚ್ಚಿಬಿದ್ದಿತ್ತು.

ರಂಗ ರೆಡ್ಡಿ ಜಿಲ್ಲೆಯ ಶಾದ್‌ನಗರ ಪಟ್ಟಣದ ರಾಷ್ಟ್ರೀಯ ಹೆದ್ದಾರಿ 44 ರ ಬಳಿ ಇರುವ ಚತನ್‌ಪಲ್ಲಿ ಸೇತುವೆ ಬಳಿ ನಾಲ್ವರು ಆರೋಪಿಗಳು ಪಶುವೈದ್ಯೆಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿ ಆಕೆಯ ದೇಹವನ್ನು ಸುಟ್ಟಿದ್ದರು. ಮೃತ ದೇಹ ನ.28ರಂದು ಪತ್ತೆಯಾಗಿತ್ತು.

ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಡಿಸೆಂಬರ್​ 6ರಂದು ಪೊಲೀಸರು ಎನ್​ಕೌಂಟರ್​ ಮಾಡಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net