ಲಾಕ್​ಡೌನ್​​ನಲ್ಲಿ ಪೊಲೀಸ್​ ಪೇದೆಯ ಕ್ರೂರತನ; 13 ವರ್ಷದ ಬಾಲಕಿ ಮೇಲೆ ರೇಪ್​

Rape 26 Feb 20
Published on

ಹೈದರಾಬಾದ್​: ಕಾನೂನು ರಕ್ಷಕನಾಗಬೇಕಿದ್ದ ಪೊಲಿಸ್​ ಓರ್ವನ ಕಾಮಕಾಂಡ ಬಯಲಾಗಿದೆ. ತೆಲಂಗಾಣದ ಸಿಕಂದರ್​​ಬಾದ್​ನಲ್ಲಿ ಏಪ್ರಿಲ್​ನಲ್ಲಿ ನಡೆದ ಘಟನೆ ಇದೀಗ ಬೆಳಕಿಗೆ ಬಂದಿದೆ. 33 ವರ್ಷದ ಪೊಲೀಸ್​ ಪೇದೆಯೋರ್ವ ತನ್ನ ಸಂಬಂಧಿಯೇ ಆದ 13 ವರ್ಷದ ಬಾಲಕಿಯನ್ನು ತನ್ನ ಮನೆಯಲ್ಲಿಯೇ ಅತ್ಯಾಚಾರ ಮಾಡಿದ ದುರ್ಘಟನೆ ನಡೆದಿದೆ.

ಲಾಕ್​ಡೌನ್​ ಇದ್ದ ಸಂದರ್ಭದಲ್ಲಿ ಪೊಲೀಸ್​ ಬಾಲಕಿಯ ಮೇಲೆ ರೇಪ್​ ಮಾಡಿದ್ದಾನೆ. ಆದರೆ ಅಂದು ಅದು ಗೊತ್ತೇ ಆಗಲಿಲ್ಲ. ಆದರೆ ಘಟನೆಯ ಬಳಿಕ ಆ ಬಾಲಕಿಯ ವರ್ತನೆಯಲ್ಲಿ ಬದಲಾವಣೆಯಾಗಿತ್ತು. ಅದರಲ್ಲೂ ಸಂಬಂಧಿಯೇ ಆಗಿರುವ ಈ ಪೊಲೀಸ್​ನನ್ನು ನೋಡಿದರೆ ಸಾಕು ಅವಳು ತೀರ ಅಸಹಜವಾಗಿ ವರ್ತಿಸಲು ಪ್ರಾರಂಭಿಸಿದ್ದಳು. ಸೂಕ್ಷ್ಮವಾಗಿ ಗಮನಿಸುತ್ತಿದ್ದ ಆಕೆಯ ತಾಯಿ, ಬಾಲಕಿಯ ಬಳಿ ಪ್ರಶ್ನಿಸಿದಾಗ ಆಕೆ ಇರುವ ಸತ್ಯವನ್ನು ಹೇಳಿದ್ದಾಳೆ. ನಾನು ಅತ್ಯಾಚಾರದ ಬಗ್ಗೆ ಯಾರಿಗೂ ಹೇಳಬಾರದು ಎಂದು ಆತ ಬೆದರಿಕೆ ಹಾಕಿದ್ದ ಎಂಬುದನ್ನೂ ಪುಟ್ಟ ಹುಡುಗಿ ಅಮ್ಮನಿಗೆ ತಿಳಿಸಿದ್ದಾಳೆ.

ನಂತರ ತಾಯಿ ಮಕ್ಕಳ ರಕ್ಷಣಾ ಎನ್​ಜಿಒ ಒಂದಕ್ಕೆ ತೆರಳಿ ನಡೆದಿರುವ ವಿಚಾರವನ್ನೆಲ್ಲ ತಿಳಿಸಿದ್ದಾರೆ. ನಂತರ ಎನ್​ಜಿಒ ಹಿರಿಯ ಅಧಿಕಾರಿಗಳು ಮಹಿಳಾ ಐಪಿಎಸ್​ ಅಧಿಕಾರಿಯನ್ನು ಸಂಪರ್ಕಿಸಿ ದೂರು ನೀಡಿದ್ದಾರೆ. ಇದನ್ನೂ ಓದಿ: ‘ಮನೆಯ ಕಿಟಕಿ ಮುಚ್ಚಿರಲಿ…ಪಾತ್ರೆ, ಡ್ರಮ್​​ಗಳನ್ನು ಬಡಿಯಿರಿ…’: ಈ ಸಲಹೆ ಯಾಕೆ ಗೊತ್ತಾ?

ಸದ್ಯ ಪೊಲೀಸ್ ಪೇದೆ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಈತ ಹೈದರಾಬಾದ್ ಕಮಿಷನರೇಟ್​ ವ್ಯಾಪ್ತಿಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದ. ಇದೀಗ ಪೊಕ್ಸೊ ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಬಾಲಕಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net