ಅಪಹಣವಾಗಿದ್ದ ವ್ಯಕ್ತಿ ಶವವಾಗಿ ಪತ್ತೆ

IMG-20251016-WA0014
Published on

ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಮದ ಮೈಲಾರ ರಸ್ತೆಯಲ್ಲಿ ಇತ್ತೀಚೆಗೆ ಅಪಹರಣಕ್ಕೊಳಗಾಗಿದ್ದ ಬಂಗಾರದ ಅಂಗಡಿ ವ್ಯಾಪಾರಿ ಮಂಜುನಾಥ (58) ತಾಲೂಕಿನ ಹರವಿಬಸಾಪುರ ಸಮೀಪದ ತುಂಗಭದ್ರಾ ನದಿಯಲ್ಲಿ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ.

ಅ.11 ರಂದು ದುಷ್ಕರ್ಮಿಗಳು ಮಂಜುನಾಥ ಅವರನ್ನು ಅಪಹರಿಸಿ ಬಿಡುಗಡೆಗೊಳಿಸಲು ಅಪಹರಣಕಾರರು 5 ಕೋಟಿ ರೂ. ಬೇಡಿಕೆ ಇಟ್ಟು ಬಳಿಕ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ವಿಜಯನಗರ ಜಿಲ್ಲಾ ಎಸ್ಪಿ ಎಸ್.ಜಾಹ್ನವಿ ಅವರು ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು.

ಈ ತನಿಖೆಯಲ್ಲಿ ಮಹಾರಾಷ್ಟ್ರದ ಪೂನಾದಲ್ಲಿ ಪ್ರಕರಣಕ್ಕೆ ಸಂಬಂಧಿಸಿದ್ದಾರೆನ್ನಲಾದ ಮಲ್ಲಿಕಾರ್ಜುನ ಉಜ್ಜಮ್ಮನವರ (27) ಹಾಗೂ ಅಂಗಡಿ ಯೋಗೀಶ(24) ಎಂಬ ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ. ಈ ಇಬ್ಬರಿಂದ ಅಪಹರಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಪಡೆದು.

ಯುವಕರು ತಿಳಿಸಿದ ಸ್ಥಳದಲ್ಲಿ ಮಂಜುನಾಥ ಅವರಿಗಾಗಿ ಶೋಧ ಕಾರ್ಯ ನಡೆಸಿದಾಗ ಹರವಿಬಸಾಪುರ ಗ್ರಾಮದ ಸಮೀಪದ ತುಂಗಭದ್ರಾ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಡಿವೈಎಸ್‌ಪಿ ವೆಂಕಟಪ್ಪ ನಾಯಕ, ಸಿಪಿಐ ದೀಪಕ್ ಬೂಸರೆಡ್ಡಿ, ಪಿಎಸ್‌ಐ ಭರತ್ ಪ್ರಕಾಶ್ ಪರಿಶೀಲನೆ ನಡೆಸಿದರು.

ಏನಿದು ಪ್ರಕರಣ

ಗ್ರಾಮದ ಮಲ್ಲಿಕಾರ್ಜುನ ಉಜ್ಜಮ್ಮನವರ ಹಾಗೂ ಅಂಗಡಿ ಯೋಗೀಶ ಇಬ್ಬರೂ ಜತೆಗೂಡಿ ಬಾಡಿಗೆ ಕಾರನ್ನು ಪಡೆದು ಸ್ವತಃ ತಾವೇ ಚಲಾಯಿಸಿಕೊಂಡು ಮಂಜುನಾಥ ಅವರನ್ನು ಅಪಹರಿಸಿದ್ದಾರೆ. ನಂತರ ಅವರ ಸಂಬಂಧಿಕರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ವಿಷಯ ಪೊಲೀಸರಿಗೆ ತಿಳಿಯುತ್ತಿದಂತೆ ಭಯದಿಂದ ಮಂಜುನಾಥ ಅವರ ಬಾಯಿ, ಕಣ್ಣಿಗೆ ಪ್ಲಾಸ್ಟಿಕ್‌ನಿಂದ ಸುತ್ತಿ ಕೈಕಾಲುಗಳನ್ನು ಕಟ್ಟಿ ಕಾರಿನ ಡಿಕ್ಕಿಯಲ್ಲಿ ಹಾಕಿದ್ದಾರೆ. ಡಿಕ್ಕಿಲ್ಲೇ ಮಂಜುನಾಥ ಮೃತಪಟ್ಟಿದರಿಂದ ತಾಲೂಕಿನ ಹರವಿ ಗ್ರಾಮದ ತುಂಗಭದ್ರಾ ನದಿಗೆ ಮೃತ ದೇಹವನ್ನು ಎಸೆದಿದ್ದರು. ಕಾರನ್ನು ನಿಟ್ಟೂರಿನ ಬಳಿ ನಿಲ್ಲಿಸಿ, ಶಿವಮೊಗ್ಗಕ್ಕೆ ತೆರಳಿದ್ದಾರೆ. ಅಲ್ಲಿಂದ ರೈಲಿನ ಪೂನಾಕ್ಕೆ ತೆರಳಿ ಡಾಬಾವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ. ತಾವು ಮಾತನಾಡಿರುವ ಸಂಭಾಷಣೆಗಳು ಯಾರಿಗೂ ದೊರಕದಂತೆ ಕೇವಲ ವಾಡ್ಸಪ್‌ನಲ್ಲಿ ಮಾತ್ರ ಕರೆ ಮಾಡಿಕೊಂಡಿದ್ದಾರೆ.

ಅಂಗಡಿ ಯೋಗೀಶ

ಫೊ-ಅ-೧೬-ಎಚ್,ಡಿ,ಎಲ್-೦೩

ಮಂಜುನಾಥ ಅವರ ದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವುದು.

ಫೊ-ಅ-೧೬-ಎಚ್,ಡಿ,ಎಲ್-೦೪

ಮಂಜುನಾಥ ಅವರಿಗಾಗಿ ಅಗ್ನಿಶಾಮಕ ಸಿಬ್ಬಂದಿ ಗುರುವಾರ ಹೂವಿನಹಡಗಲಿ ತಾಲೂಕಿನ ಹರವಿ ಗ್ರಾಮದ ತುಂಗಭದ್ರಾ ನದಿಯಲ್ಲಿ ಶೋಧ ಕಾರ್ಯ ನಡೆಸುತ್ತಿರುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net