ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಪತ್ನಿ! ಕೋಪಗೊಂಡು ಆಕೆಯನ್ನು 2ನೇ ಮಹಡಿಯಿಂದ ಎಸೆದ ಪತಿ..Husband throws wife

couple
Published on

ಉತ್ತರಪ್ರದೇಶ: ಪತ್ನಿ ಲೈಂಗಿಕ ಕ್ರಿಯೆಗೆ ( Husband throws wife) ನಿರಾಕರಿಸಿದ್ದರಿಂದ ಕೋಪಗೊಂಡ ಪತಿ, ಆಕೆಯನ್ನು ಎರಡನೇ ಮಹಡಿಯಿಂದ ಎಸೆದಿದ್ದಾನೆ. ಈ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಮುಖೇಶ್ ಅಗಿರ್ವಾರ್ ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯವರು. 2022ರಲ್ಲಿ ತೀಜಾ ಎಂಬ ಮಹಿಳೆಯನ್ನು ವಿವಾಹವಾದರು. ಮದುವೆಯ ನಂತರ ಮುಖೇಶ್ ಅವರ ನಡವಳಿಕೆ ಬದಲಾಯಿತು. ಹಲವು ಬಾರಿ ಮನೆಗೆ ಬರಲಿಲ್ಲ. ತೀಜಾ ಅನುಮಾನಗೊಂಡು ತನ್ನ ಪತಿಯನ್ನು ಅದರ ಬಗ್ಗೆ ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಅವರು ತೀಜಾ ಅವರನ್ನು ತೀವ್ರವಾಗಿ ಗದರಿಸಿ ಹಲ್ಲೆ ನಡೆಸುತ್ತಿದ್ದನು. ಹೀಗೆ ಇಬ್ಬರ ಮಧ್ಯೆ ಜಗಳ ನಡೆಯುತ್ತಲೆ ಇತ್ತು.

ನಡೆದಿದ್ದೇನು?:

ಅಕ್ಟೋಬರ್ 28, 2025 ರ ರಾತ್ರಿ, ಎಂದಿನಂತೆ ಹೊರಗೆ ಹೋಗಿ ತಡವಾಗಿ ಮನೆಗೆ ಹಿಂದಿರುಗಿದ ಮುಖೇಶ್, ತೀಜಾಳನ್ನು ತನ್ನೊಂದಿಗೆ ಲೈಂಗಿಕ ಸಂಭೋಗ ನಡೆಸಲು ಒತ್ತಾಯಿಸಿದನು. ಆದರೆ ತೀಜಾ ನಿರಾಕರಿಸಿದ್ದಾಳೆ.

ಮುಖೇಶ್‌ಗೆ ತುಂಬಾ ಕೋಪ ತಂದಿತು. ಇದರಿಂದಾಗಿ, ಅವನು ತನ್ನ ಹೆಂಡತಿ ತೀಜಾಳನ್ನು ಎರಡನೇ ಮಹಡಿಯಿಂದ ಕೆಳಗೆ ಎಸೆದಿದ್ದಾನೆ. ತೀಜಾ ಜೋರಾಗಿ ಕಿರುಚಿದ್ದನ್ನು ಕೇಳಿ ನೆರೆಹೊರೆಯವರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ತೀಜಾ ನೀಡಿದ ಹೇಳಿಕೆಯ ಆಧಾರದ ಮೇಲೆ ಆಕೆಯ ಪತಿ ಮುಖೇಶ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net