ಪತ್ನಿ 'ಸುಂದರಿಯಲ್ಲ' ಎಂದು ಆಕೆಯ ಮೇಲೆ ಬಿಸಿ ಚಾಕುವಿನಿಂದ 50ಕ್ಕೂ ಅಧಿಕ ಬರೆ ಇಟ್ಟ ಪತಿ! | Not Beautiful

photo - 2025-08-26T202729.426
Published on

Not Beautiful: ತನ್ನ ಹೆಂಡತಿ ಸುಂದವಾಗಿಲ್ಲ ಎಂದು ಆರೋಪಿಸಿ ಆಕೆ ಮೇಲೆ ಬಿಸಿ ಚಾಕುವಿನಿಂದ 50ಕ್ಕೂ ಅಧಿಕ ಬಾರಿ ಸುಟ್ಟಿರುವ ಅಘಾತಕಾರಿ ಘಟನೆ ಮಧ್ಯಪ್ರದೇಶದ ಬರ್ವಾನಿ ಜಿಲ್ಲೆಯಲ್ಲಿ ಮಂಗಳವಾರ(ಆ.26) ಬೆಳಕಿಗೆ ಬಂದಿದೆ.

ಸಂತ್ರಸ್ತೆ ಖುಷ್ಬೂ ತನ್ನ ಗಂಡ ದಿಲೀಪ್​ ಪಿಪಾಲಿಯಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಅಂಜದ್​ ಪೊಲೀಸ್​ ಠಾಣಾ ವ್ಯಾಪ್ತಿಗೆ ಒಳಪಟ್ಟಿದ್ದು, ಕೇಸ್​ ಅಲ್ಲಿಗೆ ವರ್ಗಾಯಿಸಲಾಗುವುದು. ಅಲ್ಲಿನ ಅಧಿಕಾರಿಗಳು ತನಿಖೆ ಮುಂದುವರೆಸುವುದುದಾಗಿ ಜೈತಾಪುರ ಪೊಲೀಸ್​ ಠಾಣಾ ಉಸ್ತುವಾರಿ ಸುದರ್ಶನ್​​ ಕಲೋಸಿಯಾ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿರುವ ಸಂತ್ರಸ್ತೆ ಖುಷ್ಬೂ, ''ಫ್ರೆ.2 ರಂದು ದಿಲೀಪ್​ ಅವರನ್ನು ಮದುವೆಯಾಗಿದ್ದು, ಮದುವೆ ಆದಾಗಿನಿಂದ ದಿಲೀಪ್​ ನನ್ನೊಂದಿಗೆ ಸಂತೋಷವಾಗಿ ಇಲ್ಲ. ನೀನು ನೋಡಲು ಸುಂದರವಾಗಿಲ್ಲ ಎಂದು ಹೇಳಿ ಪದೇಪದೆ ಚಿತ್ರಹಿಂಸೆ ನೀಡುತ್ತಿದ್ದಾನೆ'' ಎಂದು ಆರೋಪಿಸಿದ್ದಾಳೆ.

ಭಾನುವಾರ ದಿಲೀಪ್​​ ಕುಡಿದು ಬಂದು ನನಗೆ ಹೊಡೆದು, ಬಳಿಕ ಅಡುಗೆ ಮನೆಗೆ ಎಳೆದುಕೊಂಡು ಹೋಗಿ ಬಿಸಿ ಚಾಕುವಿನಿಂದ ಕೈ-ಕಾಲು ಸೊಂಟ ಸೇರಿ ವಿವಿಧ ಭಾಗಗಳಲ್ಲಿ 50ಕ್ಕೂ ಅಧಿಕ ಬಾರಿ ಬರೆ ಎಳೆದಿದ್ದಾನೆ ಎಂದು ಆರೋಪಿಸಿದ್ದಾಳೆ. ಅಲ್ಲದೆ, ಆಕೆಯ ತಂದೆ ಆಕೆಯ ಅತ್ತೆ-ಮಾವನ ಮೇಲೆ ವರದಕ್ಷಣೆ ಕಿರುಕುಳ ಆರೋಪಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮಾಡುವುದಾಗಿ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net