ಗಂಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಂದು ಪೊಲೀಸ್​ ಠಾಣೆಗೆ ಬಂದ ಪತ್ನಿ, ಕಾರಣ ಹೀಗಿದೆ

murder 2
Published on

ಹಾಸನ: ಪತ್ನಿಯೇ ಪತಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದು, ಬಳಿಕ ತಾನೇ ನೇರವಾಗಿ ಬೇಲೂರು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾಳೆ.

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಗ್ರಾಮದ ಚಂದ್ರೇಗೌಡ(52) ಕೊಲೆಯಾದವ. ಈತನ ಪತ್ನಿ ಇಂದ್ರಮ್ಮ ಕೊಲೆ ಮಾಡಿದವಳು. ಇದನ್ನೂ ಓದಿರಿ ಸ್ನೇಹಿತೆಯ ನಿಶ್ಚಿತಾರ್ಥಕ್ಕೆ ಬಂದ ಯುವತಿ ಮಾಡಬಾರದ್ದನ್ನು ಮಾಡಿ ಸಿಕ್ಕಿಬಿದ್ಲು!

ಚಂದ್ರೇಗೌಡ ತಾನು ಕೆಲಸ ಮಾಡುವ ತೋಟದಲ್ಲಿ ಬೇರೊಬ್ಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂದು ಆತನ ಪತ್ನಿ ಇಂದ್ರಮ್ಮ ಕಳೆದ ಒಂದು ವರ್ಷದಿಂದ ತವರು ಮನೆಗೆ ಬಂದು ಪ್ರತ್ಯೇಕವಾಗಿ ವಾಸವಿದ್ದಳು. ಪತ್ನಿಯನ್ನು ಕಾಣಲೆಂದು ಬೇಲೂರು ತಾಲೂಕಿನ ವಾಗಿನಕೆರೆ ಕಲ್ಲಳ್ಳಿ ಗ್ರಾಮದಲ್ಲಿರುವ ಆಕೆಯ ತವರು ಮನೆಗೆ ಮಂಗಳವಾರ ಚಂದ್ರೇಗೌಡ ಆಗಮಿಸಿದ್ದ.

ಅನೈತಿಕ ಸಂಬಂಧ ಕುರಿತಾಗಿ ಗಂಡ-ಹೆಂಡ್ತಿ ನಡುವೆ ಕಿತ್ತಾಟ ಶುರುವಾಗಿದ್ದು, ರೊಚ್ಚಿಗೆದ್ದ ಪತ್ನಿ ಮನೆಯಲ್ಲಿದ್ದ ಮಚ್ಚಿನಿಂದ ಪತಿಯನ್ನು ಕೊಚ್ಚಿ ಹಾಕಿದ್ದಾಳೆ. ಮಚ್ಚಿನೇಟಿನಿಂದ ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲೇ ಒದ್ದಾಡಿದ ಪತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬಳಿಕ ಪತ್ನಿ‌ ಇಂದಿರಮ್ಮ ಬೇಲೂರು ಪೊಲೀಸ್ ಠಾಣೆಗೆ ಹೋಗಿ ಗಂಡನ್ನು ತಾನೇ ಕೊಂದಿದ್ದಾಗಿ ಹೇಳಿದ್ದಾಳೆ. ಇಂದ್ರಮ್ಮಳನ್ನು ವಶಕ್ಕೆ ಪಡೆದ ಪೊಲೀಸರು, ಕೇಸ್​ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net