ಪತ್ನಿಯ ಕಿರುಕುಳ: ಮದ್ವೆಯಾದ ಮೂರೇ ತಿಂಗಳಿಗೆ ಸಾವಿನ ಮನೆಯ ಕದ ತಟ್ಟಿದ ಪತಿ

death
Published on

ಬೆಂಗಳೂರು: ನೂರಾರು ಕನಸಿನ ಬುತ್ತಿಯೊಂದಿಗೆ ಮೂರು ತಿಂಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಕನೊಬ್ಬ ದುರಂತ ಅಂತ್ಯಕಂಡ ಘಟನೆ ಎಂ.ವಿ. ಲೇಔಟ್ ಉಲ್ಲಾಳದ ಬಳಿ ನಡೆದಿದೆ.

ಮಹೇಶ್ವರ ಮೃತ ದುರ್ದೈವಿ. 3 ತಿಂಗಳ ಹಿಂದೆ ಕವನ ಎಂಬಾಕೆ ಜತೆ ಮದುವೆ ಆಗಿತ್ತು. 5 ದಿನಗಳ ಹಿಂದೆ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ತಡವಾಗಿ ದೂರು ದಾಖಲಾಗಿದೆ.

ಮಹೇಶ್ವರನ ಸಾವಿಗೆ ಪತ್ನಿಯೇ ಕಾರಣ. ವಿನಾಕಾರಣ ಗಂಡನ ಜತೆ ಜಗಳ ಮಾಡುತ್ತಿದ್ದಳು. ಹಿರಿಯರಿಗೆ ಗೌರವ ಕೊಡದೆ ಅವಮಾನಿಸುತ್ತಿದ್ದಳು. ಅವಳ ಕಾಟ ಸಹಿಸದೆ ಸಾವಿನ ಮನೆಯ ಕದ ತಟ್ಟಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net