ತಿನ್ನಲು ಚಿಕನ್ ಕರಿ​ ಮಾಡದಿದ್ದಕ್ಕೆ ಪತ್ನಿಯನ್ನು ಕೊಲೆ ಮಾಡಿದ ಪತಿ! | Chicken Curry

dk - 2025-02-26T183138.377
Published on

Chicken Curry: ರಾತ್ರಿ ಊಟಕ್ಕೆ ತಿನ್ನಲು ಚಿಕನ್ ಕರಿ ಮಾಡಿಲ್ಲ ಎಂಬ ಕಾರಣಕ್ಕೆ ಗಂಡ ತನ್ನ ಪತ್ನಿಗೆ ಕಪಾಳಮೋಕ್ಷ ಮಾಡಿದ್ದಾನೆ. ಈ ಹಿನ್ನೆಲೆ ಏಕಾಏಕಿ ನೆಲಕ್ಕೆ ಕುಸಿದು ಬಿದ್ದ ಆಕೆ ಮೃತಪಟ್ಟಿರುವ ವಿಚಿತ್ರ ಘಟನೆ ಒಡಿಸ್ಸಾದ ಥೆಂಕಾನ್​ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಈ ಘಟನೆ ಅಲ್ಲಿನ ಇಡೀ ಪ್ರದೇಶದಲ್ಲಿ ಅಘಾತದ ಅಲೆಯನ್ನೇ ಎಬ್ಬಿಸಿದೆ.

ಮೂರು ಮಕ್ಕಳ ತಾಯಿ ಕುನಿ ಪಿಂಗುವಾ(35) ಮೃತೆ. ಆಕೆಯ ಪತಿ ಜಿನಾ ಪಿಂಗುವಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದಿನಾಗೂಲಿ ಕಾರ್ಮಿಕನಾಗಿದ್ದು, ಭಾನುವಾರ ಅಂಗಡಿಯಿಂದ ಚಿಕನ್​ ಪೀಸ್​(ಮಾಂಸ) ತಂದು, ಮನೆಯಲ್ಲಿ ಕೊಟ್ಟು ರಾತ್ರಿ ಊಟಕ್ಕೆ ಬೇಯಿಸು ಎಂದು ಪತ್ನಿ ಕುನಿ ಪಿಂಗುವಾಗೆ ಹೇಳಿ ಹೊರ ಹೋಗಿದ್ದಾನೆ. ಬಳಿಕ ತಿರುಗಿ ಮನೆಗೆ ಬಂದ ಜಿನಾ ಪಿಂಗುವಾ, ಚಿಕನ್​ ಮಾಡದಿದ್ದಕ್ಕೆ ಕೋಪಗೊಂಡು ಮನಬಂದಂತೆ ಥಳಿಸಿ ಕಪಾಳಮೋಕ್ಷ ಮಾಡಿ ಸಿಟ್ಟಿನಿಂದ ಮತ್ತೆ ಹೊರ ನಡೆಸಿದ್ದಾನೆ. ಏಕಾಏಕಿ ಕೆಳಗೆ ಬಿದ್ದ ಪತ್ನಿ ಕುನಿ ಮತ್ತೆ ಮೇಲೆಳಿಲ್ಲ. ತಡರಾತ್ರಿ ಮನೆಗೆ ಬಂದ ಪತಿಗೆ ವಿಷಯ ಗೊತ್ತಾಗಿದೆ. ಅಲ್ಲಿಂದ ಪರಾರಿಯಾಗಿದ್ದಾನೆ. ಬಳಿಕ ಅಧಿಕಾರಿಗಳ ಬಂಧಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net