ಪತ್ನಿ, ಇಬ್ಬರು ಪುತ್ರಿಯರ ಪ್ರಾಣ ತೆಗೆದು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ವ್ಯಕ್ತಿ..

police 3
ಸಾಂದರ್ಭಿಕ ಚಿತ್ರ
Published on

ವೈಶಾಲಿ: ಮಾದಕ ವ್ಯಸನಿ ಪತಿಯೊಬ್ಬ ತನ್ನ ತನ್ನ ಪತ್ನಿಯನ್ನು ಕೊಂದಿದ್ದಲ್ಲದೆ ತನ್ನ ಇಬ್ಬರು ಅಮಾಯಕ ಹೆಣ್ಣು ಮಕ್ಕಳ ಪ್ರಾಣವನ್ನೂ ಕಿತ್ತುಕೊಂಡಿರುವ ಘಟನೆ ಬಿಹಾರದ ವೈಶಾಲಿಯಲ್ಲಿ ನಡೆದಿದೆ.

ಮೃತರನನ್ನು ಪತ್ನಿ ಆಶಾದೇವಿ, ಪುತ್ರಿ ಕಾಶಿಶ್ ಹಾಗೂ ನಂದಿನಿ ಎಂದು ಗುರುತಿಸಲಾಗಿದ್ದು, ಲಾಲ್ ಬಾಬು ಸಿಂಗ್ ಎಂಬಾತನೇ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಘಟನೆ ನಂತರ ಆರೋಪಿಯನ್ನು ಬಂಧಿಸಲಾಗಿದ್ದು, ಈ ಕುರಿತು ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಘಟನೆ ಹಿನ್ನೆಲೆ:
ಕಾಜಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಂಡಿ ಗ್ರಾಮದ ನಿವಾಸಿ ಲಾಲ್ ಬಾಬು ಸಿಂಗ್ ಸಿಂಗ್​ ವೃತ್ತಿಯಲ್ಲಿ ಚಾಲಕನಾಗಿದ್ದು, ಆತ ಮತ್ತೊಬ್ಬ ಕಾರು ಚಲಾಯಿಸುತ್ತಿದ್ದ. ಮಾದಕ ವ್ಯಸನಿಯಾಗಿದ್ದ ಆತ ಆಗಾಗ್ಗೆ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಬುಧವಾರವೂ ಪತ್ನಿಯೊಂದಿಗೆ ಜಗಳವಾಗಿದ್ದು, ಬಳಿಕ ಪತ್ನಿ ಆಶಾದೇವಿ, ಪುತ್ರಿ ಕಾಶಿಶ್ ಹಾಗೂ ನಂದಿನಿ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾನೆ.

ಕಾರಿನ ಮಾಲೀಕ ಬುಧವಾರ ಕೆಲಸಕ್ಕೆ ಬಾರದಿದ್ದಾಗ ಸಿಂಗ್​ನಿಗೆ ಕರೆ ಮಾಡಿದಾಗ ಆತನ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಇದಾದ ನಂತರ ಕಾರು ಮಾಲೀಕ ಆತನ ನೆರೆಹೊರೆಯವರಿಗೆ ಕರೆ ಮಾಡಿ ಸಿಂಗ್ ಜತೆ ಮಾತನಾಡುವಂತೆ ಹೇಳಿದ್ದಾನೆ. ಈ ವೇಳೆಪಕ್ಕದ ಮನೆಯವರು ಮನೆಗೆ ಬಂದಾಗ ಮನೆಯ ವರಾಂಡದಲ್ಲಿ ಆಶಾದೇವಿ ಹಾಗೂ ಅವರ ಇಬ್ಬರು ಪುತ್ರಿಯರ ಮೃತದೇಹಗಳು ರಕ್ತಸಿಕ್ತವಾಗಿ ಬಿದ್ದಿದ್ದು, ಆರೋಪಿಯೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಅಂಗಳದಲ್ಲಿ ಬಿದ್ದಿದ್ದನ್ನು ಕಂಡು ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಂಚೆ ಕಛೇರಿಗೆ ಬಂದಿದ್ದ ಪಾರ್ಸೆಲ್‌ ಸ್ಫೋಟ: ನೌಕರರು ಕಂಗಾಲು..!

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕುಟುಂಬವು ಆರ್ಥಿಕವಾಗಿ ಹಿಂದುಳಿದಿದ್ದು, ವಿಚಾರವಾಗಿ ಪತ್ನಿ ಜತೆ ಜಗಳ ನಡೆದು ಬಳಿಕ ಈ ದುರ್ಘಟನೆ ನಡೆದಿರುವ ಶಂಕೆ ವ್ಯಕ್ತವಾಗಿದೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net