

Private Video: ತನ್ನ ಪತ್ನಿ ಪ್ರೇಮಿ ಜತೆ ಮಾಡಿದ್ದ ವಿಡಿಯೋವೊಂದನ್ನು ನೋಡಿ ಮನನೊಂದು ಗಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಹರಿಯಾಣದ ರೋಹ್ಟರ್ನಲ್ಲಿ ನಡೆದಿದೆ.
ಅಕ್ಬರ್ಪುರ ಪೊಲೀಸ್ ಠಾಣೆ ಪ್ರದೇಶದ ದೋಭ್ ನಿವಾಸಿ ಮಗನ್ ಅಲಿಯಾಸ್ ಅಜಯ್ ಮೃತ ಎಂದು ಗುರುತಿಸಲಾಗಿದೆ. ಈ ವಿಡಿಯೋವನ್ನು ದಿವ್ಯಾ ಅವರೇ ತಮ್ಮ ಪತಿ ಮಗನ್ ಅವರಿಗೆ ಫೋನ್ನಲ್ಲಿ ಕಳುಹಿಸಿದ್ದಾರೆ. ಈ ವಿಡಿಯೋ ನೋಡಿದ ನಂತರ ಮಗನ್ ಸಂಪೂರ್ಣವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ.
ಇನ್ನು ದಿವ್ಯಾ, ದೀಪಕ್ ಎಂಬ ಹೆಸರಿನ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಾಳೆ. ಅತನ ಜತೆ ಪತ್ನಿ ದಿವ್ಯಾ ವಿಡಿಯೋ ಕಳುಹಿಸಿದ್ದು, ಇದರಲ್ಲಿ ಆಕೆ ದೀಪಕ್ ಮುಂದೆ ಡ್ಯಾನ್ಸ್ ಮಾಡುತ್ತಿದ್ದಾಳೆ. ದಿವ್ಯಾ ಮತ್ತು ದೀಪಕ್ ಆಕ್ಷೇಪಾರ್ಹ ಸ್ಥಿತಿಯಲ್ಲಿರುವ ವಿಡಿಯೋ ಇದಾಗಿದೆ.
ಜೂನ್ 18 ರಂದು ಮಗನ್ ತನ್ನ ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ ದೀಪಕ್ ಕುಮಾರ್ (ಮಹಾರಾಷ್ಟ್ರ ಪೊಲೀಸ್ ಇನ್ಸ್ಪೆಕ್ಟರ್) ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೂ ಮುನ್ನ ಅವರು ಎರಡು ವಿಡಿಯೋಗಳನ್ನು ಮಾಡಿದ್ದಾರೆ.
ನನ್ನ ಹೆಸರು ಮಗನ್, ಪತ್ನಿ ದಿವ್ಯಾ ಮತ್ತು ಆಕೆಯ ಪ್ರಿಯಕರ್ ದೀಪಕ್ ಕಿರುಕುಳದಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಪತ್ನಿಯ ಪ್ರಿಯಕರ ದೀಪಕ್ ಸಂಭಾಜಿ ನಗರದ ನಿವಾಸಿಯಾಗಿದ್ದು, ಪೊಲೀಸ್ ಸೇವೆಯಲ್ಲಿದ್ದಾನೆ. ಇವರಿಬ್ಬರು ಜೊತೆಯಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ನನಗೆ ಮೋಸವಾಗಿದ್ದು, ಹಣವನ್ನು ಸಹ ಪಡೆದುಕೊಂಡಿದ್ದಾರೆ. ನನಗೆ ಹಣ ನೀಡುವಂತೆ ಪದೇ ಪದೇ ಒತ್ತಡ ಹಾಕುತ್ತಾರೆ. ಈಗ ದೀಪಕ್ಗೆ ಉದ್ಯೋಗದಲ್ಲಿ ಬಡ್ತಿ ಸಿಗಲು ಲಂಚ ಕೊಡಬೇಕಿದೆ. ಅದಕ್ಕಾಗಿ ತಂದೆಯನ್ನು ಕೊಲ್ಲು ಮತ್ತು ಪೂರ್ವಜರಿಂದ ಬಂದಿರುವ ಜಮೀನು ಮಾರಾಟ ಮಾಡಿ ಹಣ ನೀಡುವಂತೆ ಹೇಳುತ್ತಿದ್ದಾರೆ.
ಅಲ್ಲದೆ, ಬೇಕಂತಲೇ ಕಿರುಕುಳ ನೀಡಲು ಆಕೆ ದೀಪಕ್ ಮುಂದೆ ಡ್ಯಾನ್ಸ್ ಮಾಡಿದ ಖಾಸಗಿ ವಿಡಿಯೋ ಕಳುಹಿಸಿ ಬೆದರಿಕೆ ಹಾಕಿದ್ದಾರೆ. ತನ್ನನ್ನು ಮದುವೆಯಾಗುವ ಮುಂಚೆಯೇ ದಿವ್ಯಾಳಿಗಹೆ ಮದುವೆಯಾಗಿತ್ತು. ನಂತರ ಈ ಪ್ರಕರಣವನ್ನು ಹಣವನ್ನು ನೀಡಿ ಇತ್ಯರ್ಥ ಮಾಡಿಕೊಂಡಿದ್ದೇನೆ. ನನ್ನ ಸಾವಿಗೆ ಇವರಿಬ್ಬರು ಕಾರಣ. ಹಾಗಾಗಿ ಇವರಿಬ್ಬರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.
ಆತ್ಮಹತ್ಯೆ ಪ್ರಕರಣದ ತನಿಖೆಯ ಸಮಯದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಆರೋಪಿಗಳ ವಿರುದ್ಧ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಠಾಣೆ ಉಸ್ತುವಾರಿ ನೀರಜ್ ಕುಮಾರ್ ಹೇಳಿದ್ದಾರೆ.(ಏಜೆನ್ಸೀಸ್)