ಕಡಲತಡಿಯಲ್ಲಿ ವಿದ್ಯಾರ್ಥಿಗಳಿಂದ ಗೀತಗಾಯನ

Published on

ಮಂಗಳೂರು: ಸರ್ಕಾರದ ನಿರ್ದೇಶನದಂತೆ ಮಂಗಳೂರಿನಲ್ಲೂ ಕನ್ನಡ ರಾಜ್ಯೋತ್ಸವ ಆಚರಣೆ ಭಾಗವಾಗಿ‌ ಲಕ್ಷ ಕಂಠದಾನ ನಡೆಯಿತು.
ಮಂಗಳೂರಿನ ತಣ್ಣೀರುಬಾವಿ ಕಡಲತೀರದಲ್ಲಿ ಸೇರಿದ ನೂರಾರು ವಿದ್ಯಾರ್ಥಿಗಳು ಹಲವು‌ ಕನ್ನಡ ಗೀತೆಗಳನ್ನು ಹಾಡಿದರು.
ತೀವ್ರ ಬಿಸಿಲಿನ ಝಳದ‌ ನಡುವೆ ಕೆಲವು ವಿದ್ಯಾರ್ಥಿಗಳು ಬಸವಳಿದರೂ ಒಕ್ಕೊರಲಿನಿಂದ ಕನ್ನಡಗೀತೆ ಹಾಡಿ ಮೆಚ್ಚುಗೆಗೆ ಪಾತ್ರರಾದರು.
ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಜಿಪಂ ಸಿಇಒ ಡಾ.ಕುಮಾರ್ ಮತ್ತಿರರ ಅಧಿಕಾರಿಗಳು ಪಾಲ್ಗೊಂಡರು.

ವಿವಿಧ ಇಲಾಖೆಗಳು, ಕಚೇರಿಗಳಲ್ಲೀ ಹಾಗೂ ಜಿಲ್ಲೆಯ ವಿವಿಧ ಕಡೆಗಳಲ್ಲಿ ಸಿಬ್ಬಂದಿಗಳು, ಅಧಿಕಾರಿಗಳು ಗೀತ ಗಾಯನವನ್ನು ಪ್ರತ್ಯೇಕವಾಗಿ ನಡೆಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net