‘ಜೈಲರ್ 2’ ಚಿತ್ರೀಕರಣಕ್ಕಾಗಿ ಕೇರಳ ತಲುಪಿದ ತಲೈವಾ; ರಜನಿಕಾಂತ್​ರನ್ನು ಸ್ವಾಗತಿಸಿದ ಫ್ಯಾನ್ಸ್​​ | Rajinikanth

Untitled design (25)
Published on

ತಿರುವನಂತಪುರಂ: 2023ರಲ್ಲಿ ತೆರೆಕಂಡ ತಲೈವಾ ರಜನಿಕಾಂತ್(Rajinikanth) ​ಅವರು ನಟಿಸಿದ್ದ ಜೈಲರ್ ಸಿನಿಮಾ ಭಾರಿ ಸಂಚಲನ ಸೃಷ್ಟಿಸಿತ್ತು. ಅದರ ಸೀಕ್ವೆಲ್​​ ‘ಜೈಲರ್​​​ 2’ ಸಿನಿಮಾ ಚಿತ್ರೀಕರಣವನ್ನು ಪ್ರಾರಂಭಿಸಿದ್ದಾರೆ. ಪ್ರಸ್ತುತ ಇದು ಕೇರಳದಲ್ಲಿ ನಡೆಯುತ್ತಿದೆ. ಜೈಲರ್​ 2 ಚಿತ್ರೀಕರಣಕ್ಕಾಗಿ ರಜನಿಕಾಂತ್​ ಕೇರಳವನ್ನು ತಲುಪಿದ್ದಾರೆ. ಅಲ್ಲಿ ಅವರಿಗೆ ಆತ್ಮೀಯ ಸ್ವಾಗತ ನೀಡಲಾಯಿತು. ವಿಮಾನ ನಿಲ್ದಾಣದಲ್ಲಿಯೇ ರಜನಿಕಾಂತ್ ಅವರನ್ನು ಅಭಿಮಾನಿಗಳು ಸುತ್ತುವರೆದಿದ್ದರು, ಇದರ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ವಿಡಿಯೋ ಜತೆಗೆ ಫೋಟೋವೊಂದು ವೈರಲ್​ ಆಗುತ್ತಿದೆ. ಅದರಲ್ಲಿ ಜೈಲರ್​ 2 ಶೂಟಿಂಗ್​​ ಸ್ಥಳದಲ್ಲಿ ಅಭಿಮಾನಿಗಳು ಸಾಲುಗಟ್ಟಿ ನಿಂತು ರಜನಿಕಾಂತ್​ ಅವರಿಗಾಗಿ ಕಾಯುತ್ತಿರುವುದನ್ನು ಕಾಣಬಹುದು. ಕಾರಿನಲ್ಲಿ ಬರುತ್ತಿರುವ ರಜನಿಕಾಂತ್ ಅಭಿಮಾನಿಗಳಿಗೆ ಹಾಯ್​ ಮಾಡುತ್ತಿರುವುದನ್ನು ನೋಡಬಹುದು.

ಮತ್ತೊಂದು ವಿಡಿಯೋ ವೈರಲ್ ಆಗುತ್ತಿದ್ದು ಅದರಲ್ಲಿ ಹೋಟೆಲ್ ಸಿಬ್ಬಂದಿ 'ತಲೈವಾ' ರಜನಿಕಾಂತ್ ಅವರನ್ನು ಆತ್ಮೀಯವಾಗಿ ಸ್ವಾಗತಿಸುತ್ತಿರುವುದನ್ನು ಕಾಣಬಹುದು. ರಜನಿಕಾಂತ್ ಕಾರಿನಿಂದ ಇಳಿದ ತಕ್ಷಣ ಹೋಟೆಲ್ ಸಿಬ್ಬಂದಿ ಗೇಟ್‌ನಲ್ಲಿಯೇ ಆರತಿ ಮಾಡಿದರು. ಈ ಶೈಲಿಯನ್ನು ನೋಡಿ ರಜನಿಕಾಂತ್ ಅವರಿಗೆ ಧನ್ಯವಾದ ಅರ್ಪಿಸಿದರು.

ಜೈಲರ್ 2 ಚಿತ್ರೀಕರಣಕ್ಕಾಗಿ ರಮ್ಯಾ ಕೃಷ್ಣನ್ ಕೂಡ ಕೇರಳ ತಲುಪಿದ್ದಾರೆ. ಈ ಚಿತ್ರದಲ್ಲಿ ಅವರು ಕೂಡ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಜನಿಕಾಂತ್ 20 ದಿನಗಳ ಕಾಲ ಕೇರಳದಲ್ಲಿಯೇ ಇದ್ದು ಚಿತ್ರೀಕರಣ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ. ಚಿತ್ರದ ಮೊದಲ ವೇಳಾಪಟ್ಟಿಯನ್ನು ಮಾರ್ಚ್ 2025ರಲ್ಲಿ ಚಿತ್ರೀಕರಿಸಲಾಯಿತು ಮತ್ತು ಈಗ ಎರಡನೇ ವೇಳಾಪಟ್ಟಿ ಕೇರಳದಲ್ಲಿ ನಡೆಯುತ್ತಿದೆ.

ಜನವರಿ 14ರಂದು ತಯಾರಕರು ‘ಜೈಲರ್ 2’ನ ಪ್ರೋಮೋವನ್ನು ಬಿಡುಗಡೆ ಮಾಡಿದರು. ಅದರಲ್ಲಿ ಕಥಾವಸ್ತು ಮತ್ತು ಮುಂದಿನ ಕಥೆಯ ಬಗ್ಗೆ ಏನನ್ನೂ ಬಹಿರಂಗಪಡಿಸಲಿಲ್ಲ. ಆದರೆ ನಿವೃತ್ತ ಜೈಲರ್ ಟೈಗರ್ ಮುತ್ತುವೇಲ್ ಪಾಂಡಿಯನ್ ಎರಡನೇ ಭಾಗದಲ್ಲಿ ಮತ್ತೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. 'ಜೈಲರ್' ಚಿತ್ರದ ಕಲೆಕ್ಷನ್ ಬಗ್ಗೆ ಹೇಳುವುದಾದರೆ 2023ರಲ್ಲಿ ಬಿಡುಗಡೆಯಾದ ಈ ಚಿತ್ರವು ದೇಶಾದ್ಯಂತ 348.55 ಕೋಟಿ ರೂ. ಮತ್ತು ವಿಶ್ವಾದ್ಯಂತ 604.5 ಕೋಟಿ ರೂಪಾಯಿ ಗಳಿಸಿತ್ತು. ಈ ಚಿತ್ರವನ್ನು ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶಿಸಿದ್ದಾರೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net