ನರ್ಸ್‌ಗಳು ರೋಗಿಗಳೊಂದಿಗೆ ಕಣ್ಣಲ್ಲಿ ಕಣ್ಣಿಟ್ಟು ಅಂತಃಕರಣದ ಮೂಲಕ ಮಾತನಾಡುತ್ತಾರೆ. ಈ ಮಾನವೀಯ ಸ್ಪರ್ಶವನ್ನು ಯಾವುದೇ ರೋಬಾಟ್, ತಂತ್ರಜ್ಞಾನ ಪ್ರತಿರೂಪಿಸಲು ಸಾಧ್ಯವಿಲ್ಲ ಎಂದರು. ಫ್ಲಾರೆನ್ಸ್ ನೈಟಿಂಗೇಲ್ ಅವರು ಹೇಳಿರುವಂತೆ ನರ್ಸಿಂಗ್ ಒಂದು ಕಲೆ. ಅದನ್ನು ಕಲೆ ಎಂದು ರೂಪಿಸಬೇಕಾದರೆ ಒಬ್ಬ ಉತ್ತಮ ಚಿತ್ರಕಾರ ಅಥವಾ ಶಿಲ್ಪಿಯಂತೆ ಸಮರ್ಪಣೆ, ಪರಿಶ್ರಮ ಮತ್ತು ತಯಾರಿ ಅಗತ್ಯ ಎಂದು ಹೇಳಿದರು.