ನರಬಲಿ ಪಡೆದ ಚಿರತೆ ಬನ್ನೇರುಘಟ್ಟಕ್ಕೆ ಶಿಫ್ಟ್

leopard shifts to Bannerghatta
ಬಿಕ್ಕೋನಹಳ್ಳಿ ಬಳಿ ಸೆರೆಯಾದ ಚಿರತೆ
Published on

ಶಿವಮೊಗ್ಗ: ತಾಲೂಕಿನ ಬಿಕ್ಕೋನಹಳ್ಳಿ ಬಳಿ ಶುಕ್ರವಾರ ರಾತ್ರಿ ಸೆರೆಯಾದ ಚಿರತೆ ಬನ್ನೇರುಘಟ್ಟ ಜೈವಿಕ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಗೊಳ್ಳಲಿದೆ ಎಂದು ಶಿವಮೊಗ್ಗ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಟಿ.ಹನುಮಂತಪ್ಪ ತಿಳಿಸಿದ್ದಾರೆ.

ಚಿರತೆಯನ್ನು ಬನ್ನೇರುಘಟ್ಟಕ್ಕೆ ಕಳುಹಿಸಲಾಗುವುದು. ಆದರೂ ಗ್ರಾಮಸ್ಥರು ಯಾವುದೇ ಕಾಡುಪ್ರಾಣಿಗಳು ಕಂಡುಬಂದರೆ ಅರಣ್ಯ ಇಲಾಖೆಗೆ ತಿಳಿಸಬೇಕು. ಸಂಜೆ ಹೊಲ ಅಥವಾ ಜಮೀನುಗಳಲ್ಲಿ ಒಬ್ಬರೇ ಓಡಾಡುವುದು ಬೇಡ. ಸುರಕ್ಷಿರವಾಗಿರಲು ಅರಣ್ಯ ಇಲಾಖೆಯೊಂದಿಗೆ ಸಹಕರಿಸಲು ಮನವಿ ಮಾಡಿದ್ದಾರೆ.
10 ದಿನದ ಕಾರ್ಯಾಚರಣೆಯಲ್ಲಿ ಮೈಸೂರಿನ ರಕ್ಷಣಾ ತಂಡ ಪಾಲ್ಗೊಂಡಿತ್ತು. 17 ಕ್ಯಾಮೆರಾ, 7 ಸ್ಥಳಗಳಲ್ಲಿ ಬೋನು ಇರಿಸಿ ಕಾರ್ಯಾಚರಣೆ ನಡೆಸಲಾಗಿತ್ತು. ಆ.8ರಂದು ಯಶೋದಮ್ಮ ಚಿರತೆ ದಾಳಿಯಲ್ಲಿ ಸಾವನ್ನಪ್ಪಿದ ಸ್ಥಳಕ್ಕೂ ಈಗ ಸೆರೆ ಸಿಕ್ಕಿರುವ ಚಿರತೆಗೂ ಕೇವಲ 800 ಮೀಟರ್‌ನಿಂದ 1 ಕಿ.ಮೀ. ದೂರವಿದೆ ಎಂದು ಡಿಸಿಎಫ್ ಶಿವಶಂಕರ್ ತಿಳಿಸಿದರು.
ಚಿರತೆಯ ಹೆಜ್ಜೆಯ ಗುರುತು, ಕ್ಯಾಮೆರಾದಲ್ಲಿ ಕಂಡುಬಂದ ಚಿರತೆ ಇದೆ ಆಗಿದೆ. ಹಾಗಾಗಿ ಯಶೋದಮ್ಮ ಅವರನ್ನು ಬಲಿ ಪಡೆದ ಚಿರತೆ ಇದಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net