

ಬೆಂಗಳೂರು; ರಾಜ್ಯ ರಾಜಧಾನಿಯಲ್ಲಿ ನಮ್ಮ ಮೆಟ್ರೋ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ದೇಣಿಗೆಯಾದ ಮಾನವ ಯಕೃತ್ತನ್ನು (Liver) ಶಸ್ತ್ರಚಿಕಿತ್ಸೆಗಾಗಿ ಯಶಸ್ವಿಯಾಗಿ ಸಾಗಿಸಲಾಗಿದೆ.
ನಿನ್ನೆ ರಾತ್ರಿ 8:42 ಕ್ಕೆ ವೈಟ್‌ಫೀಲ್ಡ್ ಮೆಟ್ರೋ ನಿಲ್ದಾಣದಿಂದ ಹೊರಟು ರಾತ್ರಿ 9:48 ಕ್ಕೆ ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣಕ್ಕೆ ಬಂದ ರೈಲಿನಲ್ಲಿ ಯಕೃತ್ತನ್ನು ಸಾಗಿಸಲಾಯಿತು ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ. ಮತ್ತೊಬ್ಬ ASO ಮತ್ತು ಮೆಟ್ರೋ ಸಿಬ್ಬಂದಿ ವೈದ್ಯಕೀಯ ತಂಡವನ್ನು ಸ್ವಾಗತಿಸಿ, ಕಾಯುತ್ತಿರುವ ಅಂಬ್ಯುಲೆನ್ಸ್ಗೆ ಯಕೃತ್ತನ್ನು ವರ್ಗಾವಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಅಂಗಾಂಗ ಶಸ್ತ್ರಚಿಕಿತ್ಸೆಗೆ ಅಗತ್ಯವಾದ ಸಮಯಕ್ಕೆ ಅಂಗವನ್ನು ಸ್ಪರ್ಶ ಆಸ್ಪತ್ರೆಗೆ ಸುರಕ್ಷಿತವಾಗಿ ಸಾಗಿಸಲಾಗಿದೆ.
ನಿನ್ನೆ (ಆ.1) ವೈದೇಹಿ ಆಸ್ಪತ್ರೆಯ ಓರ್ವ ವೈದ್ಯ ಮತ್ತು ಏಳು ಮಂದಿ ವೈದ್ಯಕೀಯ ಸಿಬ್ಬಂದಿ ಯಕೃತ್ತನ್ನು ತೆಗೆದುಕೊಂಡು ವೈಟ್ಫಿಲ್ಡ್ ಮೆಟ್ರೋ ನಿಲ್ದಾಣಕ್ಕೆ ಅಂಬ್ಯುಲೆನ್ಸ್ನಲ್ಲಿ ಸುರಕ್ಷಿತವಾಗಿ ಬಂದಿದ್ದಾರೆ. ನಂತರ ವೈದ್ಯರ ತಂಡ ಮೆಟ್ರೋ ನಿಲ್ದಾಣಕ್ಕೆ ತಲುಪಿದ ಬಳಿಕ, ಸಹಾಯಕ ಭದ್ರತಾ ಅಧಿಕಾರಿ (ASO) ಮತ್ತು ಮೆಟ್ರೋ ಸಿಬ್ಬಂದಿ ತಂಡವನ್ನು ಸ್ವಾಗತಿಸಿ, ದಾಖಲೆ ಪರಿಶೀಲನೆ ನಡೆಸಿ ಬಳಿಕ ಭದ್ರತೆ ಒದಗಿಸಿದ್ದಾರೆ.
(ಏಜೆನ್ಸೀಸ್)
ಇನ್ನೂ ಈ ಕಾರ್ಯಕ್ಕೆ ಸ್ಪಂದಿಸಿದ ಸಹಾಯಕ ಭದ್ರತಾ ಅಧಿಕಾರಿಗಳು, ಹೋಮ್ ಗಾರ್ಡುಗಳು ಮತ್ತು ಮೆಟ್ರೋ ಸಿಬ್ಬಂದಿಗೆ ವೈದ್ಯಕೀಯ ತಂಡದವರು ಕೃತಜ್ಞತೆ ಸಲ್ಲಿಸಿದ್ದಾರೆ.
ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA) ಮತ್ತು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ದೇಶದಲ್ಲಿ ಅಂಗಾಂಗ ಸಾಗಣೆಗೆ ಮೆಟ್ರೋ ರೈಲನ್ನು ಬಳಸುತ್ತಿರುವುದು ಇದು ಎರಡನೇ ಬಾರಿ ಮಾತ್ರ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.