ರಾಯನನ್ನು ಹೊಗಳಿದ ಎಲಿಜಬೆತ್ : ಯಶ್ ಇಂಡಿಯಾದ ಅತಿದೊಡ್ಡ ಸೂಪರ್ ಸ್ಟಾರ್ ಎಂದ ಹುಮಾ ಖುರೇಷಿ

ಹುಮಾ ಖುರೇಷಿ
ಹುಮಾ ಖುರೇಷಿ
Published on

ಪ್ರಮುಖ ಮುಖ್ಯಾಂಶಗಳು

  • ಯಶ್ ನಟನೆ, ಸಿನಿಮಾ ಬದ್ಧತೆಗೆ ಫಿದಾ ಆದ ಬಾಲಿವುಡ್ ನಟಿ
  • ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ನಟ ಎಂದು ಹೊಗಳಿದ ನಟಿ
  • ಟಾಕ್ಸಿಕ್ ನಲ್ಲಿ ಯಶ್ ತೆರೆ ಹಂಚಿಕೊಂಡಿರುವ ಹುಮಾ ಖುರೇಷಿ
ಬೆಂಗಳೂರು : ಯಶ್ ಅಭಿನಯದ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನಪ್ಸ್’ ಈಗಾಗಲೇ ಹೆಚ್ಚು ಸಂಚಲನ ಮೂಡಿಸಿದೆ. ಆಗಸ್ಟ್ 26ಕ್ಕೆ ಸಿನಿಮಾ ತೆರೆ ಮೇಲೆ ಬರಲಿದ್ದು, ಚಿತ್ರತಂಡ ಬಹಿರಂಗ ಪ್ರಚಾರಕ್ಕಿಳಿಯಲು ತಯಾರಿ ನಡೆಸುತ್ತಿದೆ. ಅದಕ್ಕೂ ಮುನ್ನ ಹಾಡು, ಪೋಸ್ಟರ್, ಟೀಸರ್ ಮೂಲಕ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಯಶ್ ಜತೆಗೆ ಬಾಲಿವುಡ್ ನಟಿ ಹುಮಾ ಖುರೇಷಿ ಅಭಿನಯಿಸಿದ್ದು, ‘ಎಲಿಜಬೆತ್’ ಪಾತ್ರದಲ್ಲಿದ್ದಾರೆ. ಸದ್ಯ ನಟಿಯ ‘ಬೇಬಿ ಡು ಡೈ ಡು’ ಚಿತ್ರ ತೆರೆಕಂಡಿದ್ದು, ಈ ಹಿನ್ನೆಲೆಯಲ್ಲಿ ಪ್ರಚಾರಕ್ಕೆಂದು ಬೆಂಗಳೂರಿಗೆ ಆಗಮಿಸಿದ್ದರು. ಅದೇ ಸಮಯದಲ್ಲಿ ಹುಮಾ ‘ಟಾಕ್ಸಿಕ್’ ಚಿತ್ರ ಹಾಗೂ ಯಶ್ ಕುರಿತು ಮಾತನಾಡಿದ್ದಾರೆ. ‘‘ಟಾಕ್ಸಿಕ್’ ಬಗ್ಗೆ ಕುತೂಹಲ ಇದ್ದೆ ಇದೆ. ಇಡೀ ಜಗತ್ತು ‘ಟಾಕ್ಸಿಕ್’ ಬಗ್ಗೆ ಯೋಚಿಸುತ್ತಿದೆ. ಯಶ್ ಈ ದೇಶದ ಅತಿ ದೊಡ್ಡ ಸೂಪರ್ ಸ್ಟಾರ್ ಹಾಗೂ ಅದ್ಭುತ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡುವ ವೇಳೆ ನಾನು ಸಹ ತುಂಬಾ ಕಲಿತಿದ್ದೇನೆ. ಸಿನಿಮಾ ಶೀಘ್ರದಲ್ಲೇ ತೆರೆಗೆ ಬರಲಿದೆ. ಅಲ್ಲಿ ತನಕ ತಾಳ್ಮೆ ವಹಿಸಬೇಕು’ ಎಂದರು. ‘ಬೇಬಿ ಡು ಡೈ ಡು’ ಚಿತ್ರದಲ್ಲಿ ಹುಮಾ ಖುರೇಷಿ ಮೂಗಿ- ಕಿವುಡಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಅವರ ಪಾತ್ರಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ತಬಾಹಿ’ ಸೌಂಡ್

‘ಟಾಕ್ಸಿಕ್’ ಚಿತ್ರದ ಮೊದಲ ‘ತಬಾಹಿ’ ಸಾಂಗ್ ಕಳೆದ ಮಾ. 2ರಂದು ರಿಲೀಸ್ ಆಗಿತ್ತು. ಆಗ ಕೇವಲ ಲಿರಿಕಲ್ ವಿಡಿಯೋ ಮಾತ್ರ ಬಿಡುಗಡೆ ಮಾಡಿದ್ದ ಚಿತ್ರತಂಡ ಇದೀಗ ವಿಡಿಯೋ ಹರಿಬಿಟ್ಟಿದೆ. ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಹೆಚ್ಚು ಶೃಂಗಾರವಾಗಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ವಿಶಾಲ್ ಮಿಶ್ರಾ ಸಂಗೀತ ಸಂಯೋಜಿಸುವ ಜತೆಗೆ ಹಾಡಿದ್ದು, ಕನ್ನಡ ಆವೃತ್ತಿಗೆ ಯೋಗರಾಜ್ ಭಟ್ ಸಾಹಿತ್ಯ ರಚಿಸಿದ್ದಾರೆ. ಸದ್ಯ ಈ ಹಾಡು ಜಾಲತಾಣದಲ್ಲಿ ವೈರಲ್ ಆಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net