ಷಟಸ್ಥಲ ಧ್ವಜ ಧಾಮಿರ್ಕ ಭವ್ಯ ಪರಂಪರೆಯ ದ್ಯೋತಕ

5-RNR-06
????????????????????????????????????
Published on

ಹಾವೇರಿ: ರಾಷ್ಟ್ರಧ್ವಜ ದೇಶದ ಏಕ್ಯತೆಯ ಸಂಕೇತವಾದರೆ, ಷಟಸ್ಥಲ ಧ್ವಜ ಧಾಮಿರ್ಕ ಭವ್ಯ ಪರಂಪರೆಯ ದ್ಯೋತಕವಾಗಿದೆ. ಷಟಸ್ಥಲ ಮಾರ್ಗಗಳು ಸಾಮಾನ್ಯ ಮನುಷ್ಯನನ್ನು ದೇವ ಮಾನವನನ್ನಾಗಿಸುವ, ದೇಹವನ್ನೇ ದೇವಾಲಯ ಮಾಡುವ ಆತ್ಮ ಸಾಕ್ಷತ್ಕಾರದ ದಾರಿದೀಪವಾಗಿವೆ ಎಂದು ಶಿರಸಿ ಬಣ್ಣದಮಠದ ಅಟವಿ ಶಿವಲಿಂಗ ಸ್ವಾಮೀಜಿ ಹೇಳಿದರು.

ನಗರದ ಹುಕ್ಕೇರಿಮಠದಲ್ಲಿ ಹಮ್ಮಿಕೊಂಡಿರುವ ಲಿಂ. ಶಿವಬಸವ ಸ್ವಾಮಿಗಳ 79ನೇ ಹಾಗೂ ಲಿಂ. ಶಿವಲಿಂಗ ಶ್ರೀಗಳ 16ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಶ್ರೀಮಠದ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ಷಟಸ್ಥಲ ಧ್ವಜಾರೋಹಣ ನೇರವೇರಿಸಿ ಅವರು ಆಶೀರ್ವಚನ ನೀಡಿದರು.

ಶರಣ ಸಂಸತಿಯಲ್ಲಿ ಷಟಸ್ಥಲಗಳು, ಪಂಚಾಚಾರ ಹಾಗೂ ಅಷ್ಟಾವರಣಗಳು ಅವಿಭಾಜ್ಯ ಅಂಗಗಳಾಗಿದ್ದು, ಇವುಗಳ ಪಾಲನೆಯು ಆತ್ಮೋನ್ನತೆಗೆ ಮಾರ್ಗದರ್ಶನವಾಗಿದ್ದು, ಸಾಮಾನ್ಯ ಸಾಧಕನಿಂದ ಅಸಾಮಾನ್ಯ ಶಿವಯೋಗಿ ವರೆಗೆ ದಿವ್ಯ ಬೆಳಕನ್ನು ನೀಡುವ ಚಿಂತಾಮಣಿಯಾಗಿದೆ ಎಂದರು.

12ನೇ ಶತಮಾನದಲ್ಲಿ ಶಿವಶರಣರು ಲಿಂಗಾಂಗ ಸಾಮರಸ್ಯಕ್ಕೆ ಷಟಸ್ಥಲವೇ ಮಾರ್ಗ ಎಂದು ಪ್ರತಿಪಾದಿಸಿದ್ದು, ಸಾಮಾನ್ಯನು ಭಕ್ತನಾಗಿ, ಮಹೇಶನಾಗಿ, ಪ್ರಸಾದಿಯಾಗಿ, ಪ್ರಾಣಲಿಂಗಿಯಾಗಿ, ಶರಣನಾಗಿ ಐಕ್ಯನಾಗುತ್ತಾನೆ. ಇಂಥ ಕ್ರಮ ಸಮುಚ್ಚಯವನ್ನು ಎಲ್ಲ ಬಸವಾದಿ ಶರಣರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರು ಎಂದರು.

ಹುಕ್ಕೇರಿಮಠದ ಪೀಠಾಧಿಪತಿ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಕ್ಕತೊಟ್ಟಲಕೆರೆಯ ಮಲ್ಲಿಕಾರ್ಜುನ ಸ್ವಾಮೀಜಿ, ಗುಬ್ಬಿ ತೊರವಿಮಠದ ಚಂದ್ರಶೇಖರ ಸ್ವಾಮೀಜಿ, ತೆಲಂಗಾಣದ ವಿರೂಪಾಕ್ಷ ದೇವರು ಸಮ್ಮುಖ ವಹಿಸಿದ್ದರು.

ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಅಶೋಕ ಮಾಗನೂರ, ಎಂ.ಎಸ್​. ಕೋರಿಶೆಟ್ಟರ, ಮಹಾಂತಣ್ಣ ಸುರಳಿಹಳ್ಳಿ, ತಮ್ಮಣ್ಣ ಮುದ್ದಿ, ಅಮೃತಮ್ಮ ಶೀಲವಂತರ, ಪಿ.ಡಿ. ಶಿರೂರ ಇತರರು ಇದ್ದರು.

ರೇಣುಕಾ ಮಡಿವಾಳರ ಪ್ರಾಥಿರ್ಸಿದರು. ಬಿ. ಬಸವರಾಜ ಸ್ವಾಗತಿಸಿದರು. ಎಸ್​.ಎನ್​. ಮಳೆಪ್ಪನವರ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net