ಲಿಂಗ ದೀಕ್ಷೆ ಪಡೆದ ಹುಕ್ಕೇರಿಯ ಮುಸ್ಲಿಂ ಯುವತಿ

linga dekshe
Published on

ಹುಕ್ಕೇರಿ (ಬೆಳಗಾವಿ): ಸ್ಥಳೀಯ ವಿರಕ್ತಮಠದ ಶಿವಬಸವ ಸ್ವಾಮೀಜಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವತಿಗೆ ಮಠದಲ್ಲಿ ಗುರುವಾರ ಲಿಂಗದೀಕ್ಷೆ ನೀಡಿದ್ದಾರೆ.

ಚಿಕ್ಕೋಡಿ ತಾಲೂಕಿನ ಕಬ್ಬೂರ ಮೂಲದ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಅದೇ ಗ್ರಾಮದ ಮುಸ್ಲಿಂ ಸಮುದಾಯದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಚಿಕ್ಕೋಡಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ 18 ವರ್ಷ ಆರು ತಿಂಗಳ ಯುವತಿಯನ್ನು ಮದುವೆಯಾಗಿದ್ದಾಗಿ ವಿವಾಹ ನೋಂದಣಿಯನ್ನೂ ಮಾಡಿಸಿದ್ದ.

ಆದರೆ, ಈ ಮಧ್ಯೆ ಈ ಯುವಜೋಡಿಗೆ ಸಮಸ್ಯೆಯೊಂದು ಎದುರಾಗಿತ್ತು. ಯುವಕನ ತಂದೆ-ತಾಯಿ ಲಿಂಗದೀಕ್ಷೆ ಇಲ್ಲದೆ ಸೊಸೆಯನ್ನು ಮನೆಗೆ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿರಲಿಲ್ಲ.

ಮನೆಯವರ ನಿರಾಕರಣೆ ಹಿನ್ನೆಲೆಯಲ್ಲಿ ಯುವಕ ವಿರಕ್ತಮಠಕ್ಕೆ ಭೇಟಿ ನೀಡಿ ಶ್ರೀಗಳಿಗೆ ವಿಚಾರ ತಿಳಿಸಿದ. ತನ್ನ ಹೆಂಡತಿಗೆ ಲಿಂಗದೀಕ್ಷೆ ನೀಡುವಂತೆ ವಿನಂತಿಸಿದ. ಶ್ರೀಗಳು ಕೂಡಲೇ ಒಪ್ಪಿ, ಲಿಂಗಾಯತ ವಿಧಿ-ವಿಧಾನದ ಪ್ರಕಾರ ಮುಸ್ಲಿಂ ಯುವತಿಗೆ ಲಿಂಗದೀಕ್ಷೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net