ಹುಕ್ಕಾ ಬಾರ್ ನಿಷೇಧ: ಶಾಸಕ ಸಿ.ಕೆ.ರಾಮಮೂರ್ತಿ ಸ್ವಾಗತ

BJP-logo 11
Published on

ಬೆಂಗಳೂರು:
ರಾಜ್ಯ ಸರಕಾರವು ಹುಕ್ಕಾ ಬಾರ್ ನಿಷೇಧಿಸಿದ ಕ್ರಮವನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಮತ್ತು ಶಾಸಕ ಸಿ.ಕೆ. ರಾಮಮೂರ್ತಿ ಸ್ವಾಗತಿಸಿದ್ದಾರೆ.
ಹುಕ್ಕಾ ಬಾರ್‌ಗಳಿಂದ ರಾಜ್ಯದ ಯುವ ಜನತೆ ದುಶ್ಚಟಕ್ಕೆ ಬಲಿ ಆಗುತ್ತಿದ್ದರು. ಪೋಷಕರು ಕೂಡ ತಮ್ಮ ಮಕ್ಕಳ ಭವಿಷ್ಯದ ಕುರಿತು ಆತಂಕ ಪಡುವಂತಾಗಿತ್ತು. ಇದೇ ವಿಚಾರವನ್ನು ನಾನು ಈ ಹಿಂದೆ ಸದನದಲ್ಲೂ ಕೂಡ ಪ್ರಸ್ತಾಪಿಸಿದ್ದೆ ಎಂದು ಹೇಳಿದ್ದಾರೆ.
ಹುಕ್ಕಾ ಬಾರ್ ನಿಷೇಧಕ್ಕೆ ಕುರಿತು ಸದನ ಸಮಿತಿಗೆ ಶಿಫಾರಸು ಮಾಡಲಾಗಿತ್ತು. ಇದೀಗ ಸರಕಾರವು ಸಾರ್ವಜನಿಕ ಹಿತಾಸಕ್ತಿಯನ್ನು ಪರಿಗಣಿಸಿ, ತಂಬಾಕು, ನಿಕೋಟಿನ್ ಸಹಿತ ಮತ್ತು ರಹಿತ ಎಲ್ಲ ಮಾದರಿಯ ಹುಕ್ಕಾ ನಿಷೇಧಿಸಿ ಆದೇಶಿಸಿರುವುದು ಸ್ವಾಗತಾರ್ಹ ಕ್ರಮ ಎಂದಿದ್ದಾರೆ.
ಯುವಜನತೆಯ ಭವಿಷ್ಯವನ್ನು ಗಮನದಲ್ಲಿ ಇಟ್ಟುಕೊಂಡು ರಾಜ್ಯ ಸರಕಾರವು ತನ್ನ ನಿಷೇಧ ಕುರಿತ ಆದೇಶವನ್ನು ಗಂಭೀರವಾಗಿ ಪರಿಗಣಿಸಬೇಕು. ಯಾವುದೇ ಒತ್ತಡಕ್ಕೆ ಮಣಿಯದೆ ಕೂಡಲೇ ಹುಕ್ಕಾ ಬಾರ್ಗಳನ್ನು ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net