ಹುಬ್ಬಳ್ಳಿ ಶಿರಡಿ ಸಾಯಿ ಮಂದಿರಕ್ಕೆ ನೀಡಿದ ಜಾಗ ಲೀಸ್ ಮುಂದುವರಿಕೆ

SAI BABA SHIRADI
Published on

ಬೆಂಗಳೂರು: ಹುಬ್ಬಳ್ಳಿಯ ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿಗೆ ಸಾಯಿ ಮಂದಿರಕ್ಕಾಗಿ ನೀಡಿದ್ದ ಜಾಗದ ಲೀಸ್ ಅವಧಿಯನ್ನು ಸರ್ಕಾರ 30 ವರ್ಷ ಮುಂದುವರಿಸಿದೆ.

ಲೀಸ್ ಆಧಾರದ ಮೇಲೆ ನೀಡಲಾಗಿದ್ದ ಹುಬ್ಬಳ್ಳಿ ವಿಭಾಗದ ಹಳೇ ಕೋರ್ಟ್ ಹತ್ತಿರ ಇರುವ ಹುಬ್ಬಳ್ಳಿ ಶಹರದ ಸಿ.ಟಿ.ಎಸ್. ನಂ. 498ರಲ್ಲಿನ ಲೋಕೋಪಯೋಗಿ ಇಲಾಖೆಯ 100/108 ಅಡಿ ಜಾಗವನ್ನು 5.02.2023 ಪೂರ್ವಾನ್ವಯವಾಗುವಂತೆ ಮುಂದಿನ 30 ವರ್ಷಗಳ ಅವಧಿಗೆ ಲೀಸ್ ಅವಧಿಯನ್ನು ವಿಸ್ತರಿಸಲು ಸಮ್ಮತಿಸಲಾಗಿದೆ.

ಈ ಜಾಗಕ್ಕೆ ಮೊದಲು ವಾರ್ಷಿಕ 3000ರೂ. ಲೀಜ್ ಮೊತ್ತವನ್ನು ನಿಗದಿಪಡಿಸಲಾಗಿತ್ತು. ಅದನ್ನು ಈಗ ವಾರ್ಷಿಕ 20 ಸಾವಿರ ರೂ.ಗಳಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾನೂನು ಸಚಿವ ಎಚ್.ಕೆ.ಪಾಟೀಲ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net