ಹುಬ್ಬಳ್ಳಿ ಕಲಾವಿದನ ರಂಗೋಲಿಯಲ್ಲಿ ಅರಳಿದ ಚಂದ್ರಯಾನ - 3 ಚಿತ್ತಾರ

chandrayaan3 (2)
Published on

ಹುಬ್ಬಳ್ಳಿ: ಜುಲೈ 14ರಂದು ಉಡಾವಣೆಯಾದ ಚಂದ್ರಯಾನ- 3 ನೌಕೆಯು ಇಂದು ಸಂಜೆ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ತನ್ನ ಚಂದ್ರಯಾನ-3 ನೌಕೆಯನ್ನು ಚಂದ್ರನ ಮೇಲೆ ಸಾಫ್ಟ್​ ಲ್ಯಾಂಡಿಂಗ್​ ಮಾಡುವ ಕಾರ್ಯಾಚರಣೆಯನ್ನು ಆರಂಭಿಸಲಿದೆ. ಈ ಐತಿಹಾಸಿಕ ಕ್ಷಣಕ್ಕಾಗಿ ಭಾರತ ಮಾತ್ರವಲ್ಲದೆ, ಇಡೀ ವಿಶ್ವವೇ ಎದುರು ನೋಡುತ್ತಿದೆ.

ಚಂದ್ರಯಾನ-3 ಮಿಷನ್‌ನ ಯಶಸ್ಸಿಗಾಗಿ ದೇಶಾದ್ಯಂತ ಭಕ್ತರು ವಿಶೇಷ ಪ್ರಾರ್ಥನೆಗಳನ್ನು ನಡೆಸುತ್ತಿದ್ದರೆ, ಈ ಮಧ್ಯೆ ಹುಬ್ಬಳ್ಳಿಯ ಕಲಾವಿಧರೊಬ್ಬರು ಚಂದ್ರಯಾನ - 3ಯನ್ನು ರಂಗೋಲಿ ಬಿಡಿಸುವ ಮೂಲಕವಾಗಿ ವಿಭಿನ್ನವಾಗಿ ಇಸ್ರೋ ವಿಜ್ಞಾನಿಗಳಿಗೆ ಶುಭಹಾರೈಸಿದ್ದಾರೆ.

ಹುಬ್ಬಳ್ಳಿ ಶಾಂತಿನಗರ ನಿವಾಸಿ ದಿನೇಶ್, ಬಣ್ಣ ಬಣ್ಣದ ಚಿತ್ತಾರದಲ್ಲಿ ರೋವರ್ ರಂಗವಲ್ಲಿ ಬಿಡಿಸಿ ವಿಭಿನ್ನಾಗಿ ಇಸ್ರೋ ವಿಜ್ಞಾನಿಗಳಿಗೆ ವಿಭಿನ್ನವಾಗಿ ಶುಭಹಾರೈಸಿದ್ದಾರೆ.

ತಮ್ಮ ಮನೆಯ ಆವರಣದಲ್ಲಿ ರೋವರ್, ಚಂದ್ರ ಹಾಗೂ ದೇವಿಯ ರಂಗವಲ್ಲಿ ಚಿತ್ರಬಿಡಿಸಿದ ದಿನೇಶ್, ತಮ್ಮ ಕಲೆಯ ಮೂಲಕ ಚಂದ್ರಯಾನ3 ಕ್ಕೆ ಶುಭಹಾರೈಸಿದ್ದಾರೆ. ಈ ಫೋಟೋಗಳು ಎಲ್ಲಡೆ ವೈರಲ್​ ಆಗುತ್ತಿವೆ.

ಚಂದ್ರಯಾನ-3 ನೌಕೆಯ ಈ ಒಂದು ಮಿಷನ್​ ಯಶಸ್ವಿಯಾದರೆ ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳು ಮತ್ತು ಚಂದ್ರನಲ್ಲಿ ಇದೆ ಎನ್ನಲಾದ ನೀರಿನ ಕಣಗಳ ಮೇಲಿನ ಜ್ಞಾನ ಮತ್ತಷ್ಟು ವಿಸ್ತಾರವಾಗಲಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಸಲು ಹೋಗಿ ಭಾರತದ ಚಂದ್ರಯಾನ 2 ವಿಫಲವಾಯಿತು. ಅಲ್ಲದೆ, ಮೊನ್ನೆ ಮೊನ್ನೆ ರಷ್ಯಾದ ಲೂನಾ 25 ಕೂಡ ಪತವಾಯಿತು. ಇದನ್ನು ಹೊರತುಪಡಿಸಿ ಜಪಾನ್​, ಇಸ್ರೇಲ್​ ನೌಕೆಗಳಿಂದಲೂ ಈ ಪ್ರಯತ್ನ ನಡೆದಿದೆ. ಆದರೆ, ಯಾವುದು ಕೂಡ ಸಕ್ಸಸ್​ ಆಗಿಲ್ಲ. ಕಳೆದ ಚಂದ್ರಯಾನ 2 ಸಂದರ್ಭದಲ್ಲೂ ಲ್ಯಾಂಡಿಂಗ್​ ಹಂತದಲ್ಲೇ ಯೋಜನೆ ವಿಫಲವಾಯಿತು. ಆದರೆ, ಈ ಬಾರಿ ಫಲಪ್ರದವಾಗಲಿ ಎಂದು ಅಸಂಖ್ಯಾತ ಭಾರತೀಯರು ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net