ಹುಬ್ಬಳ್ಳಿಯಲ್ಲಿ ಮೋದಿಗೆ ಆತ ಹಾರ ಹಾಕಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..!

modi fan
Published on

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟಿಸಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಒಂದು ತಾಸು ನಡೆಸಿದ ರೋಡ್​ ಶೋವನ್ನ ಕಣ್ತುಂಬಿಕೊಳ್ಳು ಲಕ್ಷಾಂತರ ಜನರು ದಾರಿಯುದ್ದಕ್ಕೂ ಕಾಯುತ್ತಾ ನಿಂತಿದ್ದರು. ಈ ವೇಳೆ ಭದ್ರತಾಲೋಪ ಕಂಡು ಬಂದಿದ್ದು. ಬಿಗಿ ಭದ್ರತೆಯನ್ನೂ ಮೀರಿ ಬ್ಯಾರಿಕೇಡ್​ ದಾಟಿ ಬಾಲಕನೊಬ್ಬ ಹಾರ ಹಿಡಿದು ಪ್ರಧಾನಿ ಕಾರಿನತ್ತ ನುಗ್ಗಿ ಬಂದ ಘಟನೆ ಗುರುವಾರ ಮಧ್ಯಾಹ್ನ ನಡೆದಿತ್ತು.

ಪ್ರಧಾನಿಗಳು ರೋಡ್​ ಶೋ ನಡೆಸುತ್ತಿದ್ದ ವೇಳೆ ಖುದ್ದು ಮೋದಿ ಕೈಗೆ ಹೂವಿನ ಹಾರ ಕೊಡಲು ಬಾಲಕನೊಬ್ಬ ಹಾರ ಹಿಡಿದು ಪ್ರಧಾನಿ ಇದ್ದ ಕಾರಿನತ್ತ ನುಗ್ಗಿದ್ದಾನೆ. ತಕ್ಷಣ ಬಾಲಕನನ್ನ ವಶಕ್ಕೆ ಪಡೆದು ಆತನ ಕೈಯಿಂದ ಹಾರವನ್ನ ಸಿಬ್ಬಂದಿ ಕಿತ್ತುಕೊಂಡಿದ್ದರು. ಅತ್ತ ಆ ಹಾರವನ್ನ ಪಡೆದ ಮೋದಿ ಅದನ್ನು ತಮ್ಮ ಕಾರಿನ ಮೇಲೆ ಹಾಕಿದ್ದರು.

ಈ ಬಗ್ಗೆ ಮಾತನಾಡಿರುವ ಹಾರ ಹಾಕಿದ ವ್ಯಕ್ತಿ ಕುನಾಲ್ ದೊಂಗಡಿ ಮಾತನಾಡಿದ್ದು 'ನನಗೆ ಮೋದಿ ಅಂದ್ರೆ ತುಂಬಾ ಪ್ರೀತಿ. ಮೋದಿಯವರನ್ನು ನೋಡಲು ನಮ್ಮ ಕುಟುಂಬಸ್ಥರ ಜೊತೆಗೆ ಹೋಗಿದ್ದೆ. ಮನೆಯ ಮಗುವಿಗೆ ಗಣವೇಷ ಹಾಕಲಾಗಿತ್ತು. ಮಗು ಕೈಯಲ್ಲಿ ಹೂವಿನ ಹಾರ ಹಿಡಿದಿತ್ತು. ಮಗುವಿನ ಕೈಯಿಂದ ಮೋದಿಯವರಿಗೆ ಹೂ ಹಾರ ಹಾಕಿಸುವ ಯೋಚನೆ ನಾವು ಮಾಡಿದ್ದೆವು. ಆದರೆ ನಮ್ಮ ಸಮೀಪ ಮೋದಿ ಬರದ ಕಾರಣ ಮಾಲೆ ಹಿಡಿದು ಮೋದಿಯತ್ತ ತೆರಳಿದೆ. ಈ ಸಂದರ್ಭ ಪೊಲೀಸರು ನನ್ನ ಪಕ್ಕಕ್ಕೆ ತಳ್ಳಿದರು. ಆದರೆ ಮೋದಿಯವರು ನನ್ನ ಹಾರ ತೆಗೆದುಕೊಂಡಿದ್ದಾರೆ. ಅವರ ಎಡಗೈ ನನ್ನ ತಾಗಿದ್ದು ಇದರಿಂದಾಗಿ ನನಗೆ ತುಂಬಾ ಖುಷಿಯಾಗಿದೆ' ಎಂದು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net