ಈ ರಾಶಿಯವರಿಗೆ ಇಂದು ಬದುಕಿಗೆ ಹೊಸ ಆಯಾಮ ಸಿಗಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಪಕ್ಕದ ಮನೆಯವರ ಜಗಳ ನಿಮ್ಮ ಮನಸ್ಸನ್ನು ಕೆಡಿಸುತ್ತದೆ. ಸಹನೆ ಕಳೆದು ಕೊಳ್ಳಬೇಡಿ. ಕಚೇರಿಯಲ್ಲಿ ವಿಶೇಷ ಜವಾಬ್ದಾರಿ. ಶುಭಸಂಖ್ಯೆ: 9

ವೃಷಭ: ವಿಶ್ರಾಂತಿ ಇಲ್ಲದ ದುಡಿಮೆ. ನಿವೇಶನ ಖರೀದಿಗೆ ನಿರ್ಧಾರ. ಅವಿವಾಹಿತರಿಗೆ ವಿವಾಹಯೋಗ. ಉನ್ನತ ಕಲಿಕೆಗೆ ನಿರ್ಧಾರ. ಶುಭಸಂಖ್ಯೆ: 2

ಮಿಥುನ: ಬೇರೆಯವರ ಅಭಿಪ್ರಾಯಕ್ಕೆ ಬೆಲೆ ಕೊಡಿ. ಮಾತಿನಿಂದ ಶತ್ರುಗಳ ಸೃಷ್ಟಿಯಾಗಬಹುದು, ಜೋಕೆ. ಅನಾರೋಗ್ಯ ಕಾಡಬಹುದು. ಶುಭಸಂಖ್ಯೆ:3

ಕಟಕ: ರಚನಾತ್ಮಕ ಕಾರ್ಯದಿಂದ ಕಚೇರಿಯಲ್ಲಿ ಪ್ರಶಂಸೆ. ಸರಕು ಸಾರಿಗೆ ವ್ಯವಹಾರದಲ್ಲಿ ಅಧಿಕ ಲಾಭ. ಧಾರ್ವಿುಕ ಕ್ಷೇತ್ರದಲ್ಲಿ ಆಸಕ್ತಿ. ಶುಭಸಂಖ್ಯೆ: 1

ಸಿಂಹ: ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ. ಉನ್ನತ ವಿದ್ಯಾಭ್ಯಾಸದ ಕನಸು ನನಸು. ಅವಿವಾಹಿತರಿಗೆ ವಿವಾಹ ನಿಶ್ಚಯ. ಶುಭಸಂಖ್ಯೆ: 3

ಕನ್ಯಾ: ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಮೇಲೆ ಇದ್ದ ಸಂಶಯ ನಿವಾರಣೆ ಆಗಲಿದೆ. ಸಂಘ-ಸಂಸ್ಥೆಗಳಲ್ಲಿ ಅಧಿಕಾರ ಪ್ರಾಪ್ತಿ ಸಾಧ್ಯತೆ. ಶುಭಸಂಖ್ಯೆ: 7

ತುಲಾ: ಒಪ್ಪಂದದಿಂದ ಸಮಸ್ಯೆ ಬಗೆಹರಿಯುವುದು. ಧಾರ್ವಿುಕ ಕೆಲಸಗಳಿಗಾಗಿ ಹಣ ಖರ್ಚು. ಕುಲದೇವರ ದೇವಾಲಯಕ್ಕೆ ಭೇಟಿ. ಶುಭಸಂಖ್ಯೆ: 3

ವೃಶ್ಚಿಕ: ಕೆಲಸ-ಕಾರ್ಯಗಳಲ್ಲಿ ನಿರೀಕ್ಷಿತ ಮುನ್ನಡೆ. ವ್ಯಾಪಾರಸ್ಥರಿಗೆ ನಿರೀಕ್ಷಿತ ಲಾಭ ದೊರೆತು ಸಮಾಧಾನ. ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 8

ಧನುಸ್ಸು: ಗೃಹ ನಿರ್ವಣಕ್ಕೆ ಚಾಲನೆ. ಮನೆಯಲ್ಲಿ ನೆಮ್ಮದಿಯ ವಾತಾವರಣ. ಗೆಳೆಯರೊಂದಿಗೆ ಉಭಯಕುಶಲೋಪರಿ. ವಿಹಾರ. ಶುಭಸಂಖ್ಯೆ: 4

ಮಕರ: ಮಕ್ಕಳ ಪ್ರಗತಿಯಿಂದ ಸಂತೋಷ. ಸಮಸ್ಯೆಯನ್ನು ಆಪ್ತರಲ್ಲಿ ಹಂಚಿಕೊಳ್ಳಿ. ಮನೆಯಲ್ಲಿ ಮಂಗಳ ಕಾರ್ಯಕ್ಕೆ ಚಾಲನೆ. ಶುಭಸಂಖ್ಯೆ: 6

ಕುಂಭ: ಅಸಾಧ್ಯ ಕೆಲಸ ಮಾಡುವ ಮೂಲಕ ಕಚೇರಿಯಲ್ಲಿ ಪ್ರಶಂಸೆ. ಬದುಕಿಗೆ ಹೊಸ ಆಯಾಮ ಸಿಗಲಿದೆ. ದಿನಾಂತ್ಯದಲ್ಲಿ ಸಿಹಿಸುದ್ದಿ. ಶುಭಸಂಖ್ಯೆ: 1

ಮೀನ: ಸಮಾಜದಲ್ಲಿ ಗೌರವಾದರಗಳು ಪ್ರಾಪ್ತಿ. ಆಸ್ತಿ ವಿಚಾರಕ್ಕೆ ನ್ಯಾಯಾಲಯಕ್ಕೆ ಹೋಗಲು ತೀರ್ಮಾನ. ವಾಹನ ಖರೀದಿ ಯೋಜನೆ. ಶುಭಸಂಖ್ಯೆ: 9

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net