

ನಾಲತವಾಡ: ಪರಿಸರ ಸ್ನೇಹಿ ಪಟ್ಟಣ ನಿರ್ಮಾಣದತ್ತ ಗಮನ ನೀಡಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯೆ ವಿಜಯಲಕ್ಷಿ$್ಮ ಇಳಕಲ್ಲ ಹೇಳಿದರು.
ಸಮೀಪದ ನಾಗಬೇನಾಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ತ್ಯಾಜ ನಿರ್ವಾಹಣ ಟಕ ನಿರ್ಮಾಣಕ್ಕೆ ಬುಧವಾರ ಬೆಳಗ್ಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ತ್ಯಾಜ್ಯ ಸಮಸ್ಯೆ ಶಾಶ್ವತವಾಗಿ ನಿವಾರಣೆಗೆ ಈ ಟಕ ಮಹತ್ತರ ಪಾತ್ರವಹಿಸಲಿದೆ ಎಂದು ತಿಳಿಸಿದರು.
ಪಂ.ಪಂ. ಸದಸ್ಯ ರಾಜನಡಗೌಡ ಮಾತನಾಡಿ, ಈ ಟಕದಿಂದ ಕೇವಲ ಸ್ವಚ್ಛತೆ ಮಾತ್ರವಲ್ಲದೆ, ಪಟ್ಟಣದ ಆರ್ಥಿಕತೆಯಲ್ಲಿಯೂ ಬದಲಾವಣೆ ಸಾಧ್ಯ. ಇಲ್ಲಿಂದ ಸಸ್ಯ ಗೊಬ್ಬರವನ್ನು ಉತ್ಪನ್ನಗೊಳಿಸಿ ರೈತರಿಗೆ ನೀಡುವ ಯೋಜನೆಯೂ ಇದೆ. ಈ ಮಲತ್ಯಾಜ್ಯ ಟಕ ಒಟ್ಟು 1.4 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದು ಹೇಳಿದರು.
ಪಪಂ ಸಿಇ ಈರಣ್ಣ ಕೊಣ್ಣೂರ, ಉಪಾಧ್ಯ ಬಸವರಾಜ ಗಂಗನಗೌಡರ ಸದಸ್ಯರಾದ ಡಾ. ಶರಣಬಸ್ಸು ಗಂಗನಗೌಡರ, ಅಂಬ್ರಪ್ಪ ಸೀರಿ, ರಮೇಶ ಆಲಕೊಪ್ಪರ, ಶಿವಪುತ್ರಪ್ಪ ಗುರಿಕಾರ, ಸಂಗಪ್ಪ ಬಾರಡ್ಡಿ, ಬಾಬು ತ್ರಿ, ಜೆಇ ವೀರೇಶ ದೊಡಮನಿ ಹಾಗೂ ಸಿಬ್ಬಂದಿ ಇದ್ದರು.