ಉದ್ಘಾಟನೆಗೂ ಮುಂಚೆ ಕಿಟಕಿ ಗಾಜು ಪುಡಿ ಪುಡಿ

Window glass shattered before inauguration
ಬರಡೋಲ ಗ್ರಾಮದದಲ್ಲಿ ಉದ್ಘಾಟನೆಗಾಗಿ ಕಾದು ನಿಂತಿರುವ ನೂತನ ಕಟ್ಟಡ.
Published on

ಹೋರ್ತಿ: ಶಿಕ್ಷಣ ಕ್ಷೇತ್ರ ಸುಧಾರಣೆಗೆ ಸರ್ಕಾರ ಕೊಟ್ಯಂತರ ರೂ. ಖರ್ಚು ಮಾಡುತ್ತಿದೆ. ಆದರೆ ಸರ್ಕಾರದ ಯೋಜನೆಗಳು ಸರಿಯಾದ ದಿಕ್ಕಿನತ್ತ ಸಾಗುತ್ತಿಲ್ಲ ಎಂಬುದಕ್ಕೆ ಇಲ್ಲೊಂದು ತಾಜಾ ಉದಾರಣೆ ಇದೆ.

ತಾಲೂಕಿನ ಬರಡೋಲಾ ಕನಾಟಕ ಪಬ್ಲಿಕ್​ ಶಾಲೆಯ ಹೊಸ ಕಟ್ಟಡದ ದುಸ್ಥಿತಿ ಇದಾಗಿದೆ. ಮಕ್ಕಳ ಅನುಕೂಲಕ್ಕಾಗಿ 2ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಹೊಸ ಕಟ್ಟಡ ನಿಮೀರ್ಸಲಾಗಿದೆ. ಮೂರು ವರ್ಷವಾದರೂ ಉದ್ಘಾಟನೆಯಾಗದೆ ಹಾಳು ಕೊಂಪೆಯಂತಾಗಿದೆ.

ಉದ್ಘಾಟನೆ ಮುಂಚೆಯೇ ಕಟ್ಟಡದ ಕಿಡಕಿ ಗಾಜು ಪುಡಿ&ಪುಡಿಯಾಗಿವೆ. ವಿದ್ಯಾಮಂದಿರವು ಅನೈತಿಕ ತಾಣವಾಗಿ ಮಾರ್ಪಟ್ಟಿದೆ.

ಮಕ್ಕಳ ಸುರತೆ ಉದ್ದೇಶದಿಂದ 2021&22 ನೇ ಸಾಲಿನಲ್ಲಿ ಈ ಕಟ್ಟಡ ನಿಮೀಸಲಾಗಿದೆ. ಮೂರು ವರ್ಷಗಾಳದರೂ ಇನ್ನೂ ಉದ್ಘಾಟನೆಯ ಮೂಹರ್ತ ಕೂಡಿಬಂದಿಲ್ಲ. ಇದೇ ಆವರಣದಲ್ಲಿರುವ ಹಳೆಯ ಕಟ್ಟಡ ಮಳೆಗಾಲದಲ್ಲಿ ಸೋರುತ್ತದೆ. ಗೋಡೆಗಳು ಬಿರುಕು ಬಿಟ್ಟಿವೆ. ಇದೆಲ್ಲವನ್ನು ಮನಗಂಡು ಶಾಲೆಯ ಮುಖ್ಯಸ್ಥರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಅವರನ್ನು ಭೇಟಿಯಾಗಿ ಹೊಸ ಕಟ್ಟಡದ ಅಗತ್ಯ ಕುರಿತು ಮನವರಿಕೆ ಮಾಡಿಕೊಟ್ಟಿದ್ದರು. ಮನವಿಗೆ ಸ್ಪಂದಿಸಿದ ಅಧಿಕಾರಿಗಳು ನೂತನ ಕಟ್ಟಡ ನಿರ್ಮಿಸಿದ್ದಾರೆ ಆದರೆ ಉದ್ಘಾಟನೆ ಯಾಕೆ ಮಾಡುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net