ಭಯೋತ್ಪಾದನೆ ವಿರೋಧಿ ದಿನಾಚರಣೆ

Anti-Terrorism Day
ರೇವತಗಾಂವದ ಗ್ರಾಮ ಪಂಚಾಯಿತಿ ಕಚೆರಿಯಲ್ಲಿ ಭಯೋತ್ಪಾದನಾ ವಿರೋಧಿ- ದಿನದ ನಿಮಿತ್ತ ಪ್ರಯುಕ್ತ ಪ್ರಮಾಣ ವಚನ ಸ್ವೀಕರಿಸಿದರು. ಗ್ರಾ.ಪಂ. ಕಾರ್ಯದರ್ಶಿ ಮಾದಣ್ಣ ಪೂಜಾರಿ ಪ್ರತಿಜ್ಞಾ ವಿಧಿ ಬೋಧಿಸಿದರು. ಎಸ್​.ಎಂ. ಮಾಳಿ, ಲಾಲಪ್ಪ ಬೀರುಣಗಿ, ಸುರೇಶ ಹಕ್ಕೆ ಇದ್ದರು.
Published on

ರೇವತಗಾಂವ : ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಭಯೋತ್ಪಾದನೆ ವಿರೋಧಿ ದಿನಾಚರಣೆ ನಿಮಿತ್ತ ಗ್ರಾ.ಪಂ. ಕಾರ್ಯದರ್ಶಿ ಮಾದಣ್ಣ ಪೂಜಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.

ನಂತರ ಮಾತನಾಡಿದ ಅವರು, ಈ ದಿನ ಭಾರತದ ಸದ್ಭಾವನಾ ದಿನ. ಎಲ್​ಟಿಟಿಗೆ ಭಾರತದ ಪ್ರಧಾನಿ ರಾಜೀವ್​ ಗಾಂಧಿ ಹುತಾತ್ಮರಾದ ದಿನವನ್ನು ಭಯೋತ್ಪಾದನೆ ವಿರೋಧಿ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.

ಗ್ರಾಮೀಣ ಪುನರ್ವಸತಿ ಕಾರ್ಯಕರ್ತ ಎಸ್​.ಎಂ.ಮಾಳಿ, ಡೇಟಾ ಅಪರೇಟರ್​ ಲಾಲಪ್ಪ ಬೀರುಣಗಿ, ಲಾಯಪ್ಪ ಲೋಣಿ, ಸುರೇಶ ಹಕ್ಕೆ, ಬೀರಪ್ಪ ಹಿರೇಕುರುಬರ, ಬಸವರಾಜ ಪೂಜಾರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net