

ತಾಳಿಕೋಟೆ: ಕೂಡಲ ಸಂಗಮದ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು ಸಮಾಜಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಜಗದ್ಗುರುಗಳು ಕೈಗೊಳುವ್ಳ ರ್ನಿಣಯಕ್ಕೆ ಪಂಚಮಸಾಲಿ ಸಮಾಜದವರು ಬದ್ದರಾಗಿರುತ್ತಾರೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಕಾಶಿನಾಥ ಮುರಾಳ ಹೇಳಿದರು.
ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀಗಳು 2ಎ ಮೀಸಲಾತಿಗಾಗಿ 15 ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಒಡೆದು ಹೋಗಿದ್ದ ಸಮಾಜವನ್ನು ಒಗ್ಗೂಡಿಸುವ ಕಾರ್ಯ ಸ್ವಾಮೀಜಿ ಮಾಡುತ್ತಿದ್ದಾರೆ ಎಮದರು.
ಶಾಸಕ ವಿಜಯಾನಂದ ಕಾಶಪ್ಪನವರ ಅವರು ಜಗದ್ಗುರುಗಳ ಬಗ್ಗೆಯೇ ಅವಹೇಳನಕಾರಿಯಾಗಿ ಮಾತನಾಡಿದ್ದು, ಮತ್ತೊಂದು ಪೀಠ ಸ್ಥಾಪನೆ ಮಾಡುವ ವಿಚಾರ ವ್ಯಕ್ತಪಡಿಸಿ ಸಭೆ ನಡೆಸಲು ಮುಂದಾಗಿರುವುದು ಸರಿಯಲ್ಲ. ಈ ಹಿಂದೆ ಹರಿಹರ ಪೀಠ ಸ್ಥಾಪನೆಯಲ್ಲಿ ಸಮಾಜದ ಜನರು ಕೈ ಸುಟ್ಟುಕೊಂಡಿದ್ದಾಗಿದೆ. ಮತ್ತೊಂದು ತಪ್ಪು ಸಮಾಜದವರು ಮಾಡುವುದಿಲ್ಲ ಎಂದರು.
ಸಮಾಜದ ನಾಯಕ ಬಸನಗೌಡ ಪಾಟೀಲ ಯತ್ನಾಳರಿಗೆ ಅನ್ಯಾಯವಾದಾಗ ಅದರ ವಿರುದ್ಧ ದ್ವನಿ ಎತ್ತುವ ಕೆಲಸವನ್ನು ಜಗದ್ಗುರುಗಳು ಮಾಡಿದ್ದಾರೆ. ಜಗದ್ಗುರುಗಳ ಹಿಂದೆ ಇಡೀ ಪಂಚಮಸಾಲಿ ಸಮಾಜವಿದೆ ಎಂದು ಹೇಳಿದರು.
ಬಸವ ಜಯ ಮೃತ್ಯುಂಜಯ ಸ್ವಾಮಿಗಳು ಕೂಡಲ ಸಂಗಮದಲ್ಲಿ 20 ರಂದು ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆ ಕರೆದಿರುವದರಿಂದ ತಾಲೂಕಿನಿಂದ ಪಂಚಮಸಾಲಿ ಸಮಾಜದ ಸಹಸ್ರಾರು ಜನರು ಸ್ವಯಂ ಪ್ರೇರಿತವಾಗಿ ಭಾಗವಹಿಸಲಿದ್ದಾರೆ ಎಂದರು.
ಸಮಾಜದ ಯುವ ಮುಖಂಡ ವೀರೇಶಗೌಡ ಬಾಗೇವಾಡಿ ಮಾತನಾಡಿ, ಜಗದ್ಗುರುಗಳ ಮಾರ್ಗದರ್ಶನದಲ್ಲಿ ಸಮಾಜ ಸಾಗುತ್ತಿದೆ.20 ರಂದು ಜಗದ್ಗುರುಗಳು ಕೂಡಲ ಸಂಗಮದಲ್ಲಿ ನಡೆಸಲಿರುವ ಪಂಚಮಸಾಲಿ ಸಮಾಜದ ಪೂರ್ವಭಾವಿ ಸಭೆಯಲ್ಲಿ ತಾಲೂಕಿನಿಂದ ಹತ್ತು ಸಾವಿರ ಜನರು ಭಾಗವಹಿಸುವರು ಎಂದರು.
ಪಂಚಮಸಾಲಿ ಸಮಾಜದ ಅಧ್ಯ ಡಾ.ವ್ಹಿ.ಎಸ್.ಕಾರ್ಚಿ, ಯುವ ಮುಖಂಡ ದ್ಯಾಮನಗೌಡ ಪಾಟೀಲ, ಕುಮಾರಗೌಡ ಪಾಟೀಲ ಮಾತನಾಡಿದರು.
ಸಮಾಜದ ಮುಖಂಡರಾದ ರಾಮನಗೌಡ ಬಾಗೇವಾಡಿ, ಡಿ.ವ್ಹಿ.ಪಾಟೀಲ, ಅಶೋಕಗೌಡ ಪಾಟೀಲ, ಪ್ರಭು ಬಿಳೇಬಾವಿ, ನಾಗಪ್ಪ ಚಿನಗುಡಿ, ಗುರಸಂಗ ಕಶೆಟ್ಟಿ, ಬಸನಗೌಡ ಪಾಟೀಲ, ಮುತ್ತು ಕಶೆಟ್ಟಿ, ಪ್ರಕಾಶ ಸಾಸಾಬಾಳ, ಮುರುಗೇಶ ಕೋರಿ, ಭೀಮನಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಕಾಶಿನಾಥ ಅರಳಿಚಂಡಿ, ಶಿವರಾಜ ಪಾಟೀಲ, ನಿಂಗು ಕುಂಟೋಜಿ, ಅಶೋಕ ಚಿನಗುಡಿ, ಸಿದ್ದನಗೌಡ ಪಾಟೀಲ, ಜಗದೀಶ ಬಿಳೇಭಾವಿ, ನಾಗಪ್ಪ ಗೊಟಗುಣಕಿ, ಕಲ್ಲಪ್ಪಗೌಡ ಪಾಟೀಲ, ಭೀಮು ಸೂಳಿಭಾವಿ, ಜಗದೀಶ ಬಿಳೇಭಾವಿ, ಪ್ರಕಾಶ ಪಾಟೀಲ, ಪ್ರಭು ಕಲ್ಲೂರ, ಸುರೇಶ ಗುಂಡಣ್ಣವರ, ಕುಮಾರ ಭಾವಿ, ಸಂಗಮೇಶ ಹಾರಿವಾಳ, ಬಸವರಾಜ ಕಶೆಟ್ಟಿ, ಸಿದ್ದು ಬೋಳಶೆಟ್ಟಿ, ಈರಣ್ಣ ಮೆಲೇಶ್ವರ, ದೇಗಿನಾಳ ಉಪಸ್ಥಿತರಿದ್ದರು.