ನೈಸರ್ಗಿಕ ಬಣ್ಣ ಉಪಯೋಗಿಸಿ

Use natural color
Published on

ನಾಲತವಾಡ: ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮಣ್ಣನ ದಹನದ ವೇಳೆ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. ಬಣ್ಣ ಆಡುವಾಗ ನೈಸರ್ಗಿಕ ಬಣ ಬಳಸಿ ಎಂದು ಪಿಎಸ್​ಐ ಸಂಜಯ ತಿಪರೆಡ್ಡಿ ಸಲಹೆ ನೀಡಿದರು.

ಪಟ್ಟಣದ ಹೊರ ಪೊಲೀಸ್​ಠಾಣೆಯಲ್ಲಿ ಜರುಗಿದ ಹೋಳಿ ಹಾಗೂ ರಮ್ಜಾನ್​ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು,

ಪಿಯುಸಿ ಹಾಗೂ ಎಸ್​ಎಸ್​ಎಲ್ಸ್ಸಿ ಪರೀೆ ನಡೆಯುತ್ತಿದ್ದು, ಹಲಗೆ ಬಾರಿಸುವವರು ಪರೀಾರ್ಥಿಗಳಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ನಾಲತವಾಡ ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಮೊದಲಿನಿಂದಲೂ ಹಿಂದೂ&ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳುತ್ತಿರುವುದು ಸಂತಸದ ವಿಷಯ .ಮುಂದೆಯೂ ಇದೇ ರೀತಿ ಹಬ್ಬಗಳನ್ನು ಆಚರಿಸಿ ಎಂದು ಹೇಳಿದರು.

ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಭೀಮಣ್ಣ ಗುರಿಕಾರ, ಸಿದ್ದಣ್ಣ ಕಟ್ಟಿಮನಿ, ಅಂಜುಮನ್​ ಕಮಿಟಿ ಅಧ್ಯ ಲಾಳೇಮಶಾಕ ಅವಟಿ, ಪಟ್ಟಣ ಪಂಚಾಯಿತಿ ಉಪಾಧ್ಯ ಬಸವರಾಜ ಗಂಗನಗೌಡ್ರ ಗಡ್ಡಿ, ಪ್ರಮುಖರಾದ ಅಮರಪ್ಪ ಶೀರಿ, ಪುತ್ರಪ್ಪ ಗುರಿಕಾರ, ಮಾಜಿ ಸದಸ್ಯ ಬಾಲಚಂದ್ರ ಗದಗ, ಬಸವ ಕೇಂದ್ರದ ಗೌರವ ಕಾರ್ಯದರ್ಶಿ ಮಂಜುನಾಥ ಕಟ್ಟಿಮನಿ, ನಿಂಗಪ್ಪ ತಳವಾರ, ಈರಯ್ಯ ಮಠಪತಿ, ಗುರು ತಂಗಡಗಿ, ಸುಭಾಷ ಗಡ್ಡಿ, ವೀರೇಶ ಕಸಬೇಗೌಡ್ರ, ಮಂಜುನಾಥ ಕಸಬೇಗೌಡ್ರ, ಸಂಗಪ್ಪ ಹಾದಿಮನಿ, ಬಸವರಾಜ ಚಿಂಚೋಳಿ, ಬಸವರಾಜ ಹಿಪ್ಪರಗಿ, ಅಶೋಕ ಗಣಿ, ಹಣಮಂತ ಹೆಬ್ಬುಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net