

ಗೊಳಸಂಗಿ: ನಾಯಕತ್ವಕ್ಕೆ ಬೇಕಾಗುವ ಗುಣ ಲಣಗಳು ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನಲಿಕಲಿಯಿಂದ ಸಿಗುತ್ತದೆ ಎಂದು ಶಿಕ ಎಚ್.ಡಿ.ನದ್ಾ ಹೇಳಿದರು.
ಸರ್ಕಾರಿ ಕನ್ನಡ ಗಂಡು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದರು.
ಮಕ್ಕಳು ಪ್ರಾಥಮಿಕ ಹಂತದ 1 ರಿಂದ 4 ನೇ ತರಗತಿಯಲ್ಲಿರುವಾಗ ನಲಿಯುತ್ತ ಕಲಿತು, 5 ರಿಂದ 7 ನೇ ತರಗತಿವರೆಗೆ ಕಲಿಯುತ್ತ ನಲಿಯುವುದನ್ನು ಶಿಣ ತರು ಕಂಡುಕೊಂಡ ಹೊಸ ಅನುಭವ. ಬಾಲ್ಯದಲ್ಲಿ ಮಕ್ಕಳು ಆಟವಾಡುತ್ತ ಪಾಠ ಕಲಿಯಬೇಕು. ಇದರಿಂದ ಅರ ಮಕ್ಕಳ ಅಂತರಾಳವನ್ನು ಮುಟ್ಟುವುದು ನಿಶ್ಚಿತ ಎಂದರು.
ಎಸ್ಡಿಎಂಸಿ ಅಧ್ಯ ಗೋಪಾಲ ದಳವಾಯಿ ಅಧ್ಯತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಶೇಖರ ದಳವಾಯಿ, ಎಸ್ಡಿಎಂಸಿ ಮಾಜಿ ಸದಸ್ಯ ಡಾ.ಎಂ.ಎಸ್.ಮೇಟಿ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ದಯಾನಂದ ಹೆಬ್ಬಾಳ, ಪಿಕೆಪಿಎಸ್ ಉಪಾಧ್ಯ ಸುದೇಶ ದಳವಾಯಿ, ಪ್ರಮುಖರಾದ ಕುಮಾರಗೌಡ ಪಾಟೀಲ, ಬಿ.ಎಸ್.ಮೇಟಿ, ಜಗದೀಶ ಹಟ್ಟಿ, ಸಂಗಮೇಶ ಗುಳೇದಗುಡ್ಡ, ಸುರೇಶ ಕನಮುಚನಾಳ, ಸದಾಶಿವ ಚಿಮ್ಮಲಗಿ, ಪೂರ್ಣಿಮಾ ಕಂಬಳಶೆಟ್ಟಿ, ನೀಲಮ್ಮ ಹೆಳವರ ಪಾಲ್ಗೊಂಡಿದ್ದರು.
ಮುಖ್ಯಗುರು ಬಿ.ಐ.ಚಲ್ಮಿ ಸ್ವಾಗತಿಸಿದರು. ಶಿಕ ಎಂ.ಬಿ.ಬಳಮಕರ ನಿರೂಪಿಸಿದರು.