ಧರ್ಮ ಭಾರತೀಯ ಸಂಸತಿಯ ಜೀವಾಳ

Religion is the lifeblood of the Indian Parliament
ಮಹಾದೇವಯ್ಯ ಶಾಸ್ತ್ರಿ
Published on

ತಾಳಿಕೋಟೆ: ಧರ್ಮ ಎಂಬುದು ಭಾರತೀಯ ಸಂಸತಿಯ ಜೀವಾಳವಾಗಿದೆ. ಈ ಜಗತ್ತು ಧರ್ಮದ ಮೇಲೆ ನಿಂತಿದೆ. ಪ್ರಾಣಿ, ಪ, ಪ್ರತಿ ವಸ್ತುವಿಗೂ ತನ್ನದೇ ಆದ ಧರ್ಮವಿರುತ್ತದೆ. ಆ ಧರ್ಮವೇ ಎಲ್ಲರನ್ನು ಕಾಪಾಡುತ್ತದೆ ಎಂದು ಪುರಾಣ ಪ್ರವಚನಕಾರ ಶರಣಸೋಮನಾಳದ ಶ್ರೀ ಮಹಾದೇವಯ್ಯ ಶಾಸ್ತ್ರಿ ನುಡಿದರು.

ಶರಣಮುತ್ಯಾಜಾತ್ರೆ ನಿಮಿತ್ತ ಶ್ರೀಮಠದ ಪ್ರಾಂಗಣದಲ್ಲಿ ಏರ್ಪಡಿಸಿದ್ದ ಪವಾಡ ಬಸವೇಶ್ವರ ಪುರಾಣದ 2ನೇ ದಿನದ ಪ್ರವಚನದಲ್ಲಿ ನೀಡಿದರು.

ಧರ್ಮವೆಂದರೆ ಮಾನವ ನಿರ್ಮಿತ ಕಲಹ ಮಾಡುವ ಧರ್ಮವಲ್ಲ. ಸಕಲ ಜೀವಿಗಳಿಗೂ ಒಳಿತು ಬಯಸುವುದು, ಸರ್ವೇಜನ ಸುಖಿನೋ ಭವಂತು ಎಂಬುವುದೇ ನಿಜವಾದ ಧರ್ಮ ಎಂದರು.

ತಾಳಿಕೋಟೆ ಪಟ್ಟಣ ಈ ಹಿಂದೆ ಶಿವಯೋಗಿಗಳು, ದಾರ್ಶನಿಕರು ಹುಟ್ಟಿ ಬೆಳೆದ ಭೂಮಿ. ಇಲ್ಲಿ ಶ್ರೀಖಾಸ್ಗತೇಶ್ವರರು, ಸಾಂಭಪ್ರಭು ಶರಣರು ಹಾಗೂ ಹಲವಾರು ಮಹಾತ್ಮರು ನಡೆದಾಡಿದ ಪಾವನ ಭೂಮಿ ಎಂದು ಬಣ್ಣಿಸಿದರು.

ಶ್ರೀಶರಣರ ಮಠದ ಬಸಣ್ಣ ಶರಣಮುತ್ಯಾ, ಆನಂದ ಶರಣರು, ಸಂಗಮೇಶ ಶರಣರು, ಕಾಶಿರಾಯ ದೇಸಾಯಿ, ಗುರುಮೂರ್ತಿ ಹಿರೇಮಠ, ಮಹಾದೇವಿ ಹಾವಿನಾಳ, ಮಲ್ಲಣ್ಣ ಶರಣರು, ಭೀಮಣ್ಣ ಇಂಗಳಗಿ, ಗುರು ಶರಣರು ಉಪಸ್ಥಿತರಿದ್ದರು. ರಾಜು ಗುಬ್ಬೇವಾಡ, ಬಸನಗೌಡ ಬಿರಾದಾರ ಸಂಗೀತ ಸಾಥ್​ ನೀಡಿದರು.

ಶರಣಗೌಡ ಪೊಲೀಸ್​ ಪಾಟೀಲ ಸ್ವಾಗತಿಸಿದರು. ಈರಣ್ಣ ಶರಣರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net