ಮುದ್ದೇಬಿಹಾಳದಲ್ಲಿ ರಂಗಿನಾಟಕ್ಕೆ ತೆರೆ

Open for dancing in Muddebihal 1111
ಮುದ್ದೇಬಿಹಾಳದ ಮುಖ್ಯ ಬಜಾರ್​ನಲ್ಲಿ ಯುವಕರು ಎರಡನೇ ದಿನದ ರಂಗಿನಾಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
Published on

ಮುದ್ದೇಬಿಹಾಳ: ಪಟ್ಟಣದಲ್ಲಿ ಹೋಳಿ ಹಬ್ಬದ ನಿಮಿತ್ತ ಎರಡು ದಿನಗಳ ರಂಗಿನಾಟಕ್ಕೆ ಶನಿವಾರ ಸಂಜೆ ಶವದ ಸೋಗು, ಗೋಮಾತೆ ಪೂಜಿಸುವ ಮೂಲಕ ತೆರೆ ಬಿದ್ದಿತು. ಕೇಂದ್ರ ಸ್ಥಾನವಾದ ಮುಖ್ಯ ಬಜಾರ್​, ದ್ಯಾಮವ್ವನ ಕಟ್ಟೆಯ ಹತ್ತಿರ ತರಹೇವಾರಿ ಹಾಡುಗಳಿಗೆ ಯುಜನತೆ ಮಾತ್ರವಲ್ಲದೆ, ಮಧ್ಯವಯಸ್ಕರೂ ಜತೆಗೂಡಿ ಪರಸ್ಪರ ಬಣ್ಣದ ನೀರು ಎರಚಿಕೊಂಡು, ಕುಣಿದು ಕುಪ್ಪಳಿಸಿ ಬಣ್ಣದಲ್ಲಿ ಮಿಂದೆದ್ದರು.

ಬಜಾರ್​ ಮಾರ್ಗವಾಗಿ ಸಾಗಿದ ಗೋಮಾತೆಗೆ ಬಾಳೆಹಣ್ಣು ತಿನ್ನಿಸಿ ಭಕ್ತಿಭಾವ ಮೆರೆದರು. ವಿವಿಧ ಬಡಾವಣೆಗಳಲ್ಲಿ ಮಹಿಳೆಯರು, ಮಕ್ಕಳು ಬಣ್ಣ ಆಡಿದರು. ಅಲ್ಲಲ್ಲಿ ಹಲಗಿ ನಿನಾದ ಜೋರಾಗಿತ್ತು. ಅನೇಕರು ರಾಸಾಯನಿಕ ಮಿಶ್ರಿತ ಬಣ್ಣಕ್ಕೆ ಹೆದರಿ ಊರು ತೊರೆದು ಬೇರೆಡೆ ಪ್ರವಾಸಕ್ಕೆ ತೆರಳಿದ್ದರೂ ಬಣ್ಣದ ಕಳೆ ಕಡಿಮೆಯಾಗಲಿಲ್ಲ. ಮನೆಯಲ್ಲಿ ಅಡಗಿದ್ದವರನ್ನು ಸ್ನೇಹಿತರ ಬಳಗ ಹೊರಗೆ ಕರೆದು ಬಣ್ಣ ಹಚ್ಚಿ ಹಬ್ಬದ ರಂಗೇರಿಸಿದರು. ಸಿಪಿಐ ಮೆಹಮ್ಮೂದ್​ ಸಿಯುದ್ದೀನ್​, ಪಿಎಸ್​ಐ ಸಂಜಯ್​ ತಿಪ್ಪರಡ್ಡಿ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್​ ಒದಗಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net