ಮಠಗಳು ಸಂಸ್ಕಾರದ ತಾಣಗಳು

Monasteries are places of worship.
ಕಲಕೇರಿಯ ಗುರುಮರುಳಾರಾಧ್ಯ ಹಿರೇಮಠದಲ್ಲಿ ತಿಂಗಳ ಪರ್ಯಂತ ನಡೆಯಲಿರುವ ಕಾಲಜ್ಞಾನಿ ಕಡಕೋಳದ ಮಡಿವಾಳೇಶ್ವರ ಪುರಾಣಕ್ಕೆ ಮಾಗಣಗೇರಿಯ ಡಾ. ವಿಶ್ವಾರಾಧ್ಯ ಶಿವಾಚಾರ್ಯರು ಚಾಲನೆ ನೀಡಿದರು.
Published on

ಕಲಕೇರಿ : ಸನಾತನ ಕಾಲದಿಂದಲೂ ಮಠಮಾನ್ಯಗಳಿಗೆ ತನ್ನದೇ ಆದ ವಿಶೇಷ ನತೆವಿದ್ದು, ಸಮಾಜ ತಿದ್ದುವ ಕಾರ್ಯ ಮಾಡುತ್ತಿವೆ. ಹೀಗಾಗಿ ಮಠಗಳು ಸಂಸ್ಕಾರ ನೀಡುವ ತಾಣಗಳಾಗಿ ಮಾರ್ಪಟ್ಟಿವೆ ಎಂದು ಮಾಗಣಗೇರಿಯ ಡಾ. ವಿಶ್ವಾರಾಧ್ಯ ಶಿವಾಚಾರ್ಯರು ಹೇಳಿದರು.

ಗ್ರಾಮದ ಗುರುಮರುಳಾರಾಧ್ಯ ಹಿರೇಮಠದಲ್ಲಿ ಲಿಂ. ಬಸವಲಿಂಗ ಮರುಳಸಿದ್ಧ ಶಿವಾಚಾರ್ಯರ 22ನೇ ಪುಣ್ಯ ಸ್ಮರಣೋತ್ಸವದ ನಿಮಿತ್ತ ಒಂದು ತಿಂಗಳು ನಡೆಯಲಿರುವ ಕಾಲಜ್ಞಾನಿ ಕಡಕೋಳದ ಮಡಿವಾಳೇಶ್ವರ ಪುರಾಣಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲಕೇರಿಯ ಗುರುಮರುಳಾರಾಧ್ಯರ ಹಿರೇಮಠಕ್ಕೆ ಶತಶತಮಾನಗಳ ಇತಿಹಾಸವಿದ್ದು ಕಲಬುರಗಿಯ ಮಹಾದಾಸೋಹಿ ಶರಣ ಬಸವೇಶ್ವರರಿಗೆ, ಕಡಕೋಳದ ಮಡಿವಾಳಪ್ಪನಿಗೆ ದೀೆ ಕೊಟ್ಟ ಕೀರ್ತಿ ಕಲಕೇರಿ ಹಿರೇಮಠದ ಗುರು ಪರಂಪರೆಗೆ ಸಲ್ಲುತ್ತದೆ, ಪ್ರಸ್ತುತ ಶ್ರೀಮಠದ ಪೀಠಾಧಿಪತಿ ಸಿದ್ಧ್ದರಾಮ ಶಿವಾಚಾರ್ಯರು ಧಾರ್ಮಿಕ, ಸಾಮಾಜಿಕ ಕಾರ್ಯ ಮಾಡುತ್ತಿದ್ದಾರೆ ಎಂದರು.

ಪಂ. ಪುಟ್ಟರಾಜ ಶಾಸ್ತ್ರಿಗಳು ಕಾಲಜ್ಞಾನಿ ಕಡಕೋಳದ ಮಡಿವಾಳೇಶ್ವರ ಪುರಾಣ ಹೇಳಿದರು. ಹಿರೇಮಠದ ಒಡೆಯರಾದ ಸಿದ್ಧ್ದರಾಮ ಶಿವಾಚಾರ್ಯರು ಅಧ್ಯತೆ ವಹಿಸಿದ್ದರು. ಕಲಕೇರಿಯ ಸಂಸ್ಥಾನ ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು ನೇತೃತ್ವ್ವ ವಹಿಸಿದ್ದರು.

ಸಣ್ಣಶರಭಯ್ಯ ಗದ್ದಗಿಮಠ, ಕಾಶಿನಾಥ ಹಿರೇಮಠ, ಮಲ್ಲಯ್ಯ ಹಿರೇಮಠ, ಶರಣಯ್ಯ ಮಠಪತಿ, ಮಲಕಾಜಪ್ಪಗೌಡ ಬಿರಾದಾರ, ಶಾಂತಗೌಡ ಪಾಟೀಲ, ಅಮರೇಶ ನಾಡಗೌಡರು, ಶಾಂತಪ್ಪ ಪಟ್ಟಣಶೆಟ್ಟಿ, ದೇವಿಂದ್ರ ಜಂಬಗಿ, ಸಿ.ಎಸ್​. ಹಿರೇಮಠ, ಷಣ್ಮುಖಪ್ಪ ಝಳಕಿ, ಆರ್​.ಡಿ. ಪಾಟೀಲ, ಆರ್​.ಜಿ. ಗುಮಶೆಟ್ಟಿ, ಜಹಾಂಗೀರಬಾಶಾ ಸಿರಸಗಿ, ಮಹಾಂತೇಶ ಮೂಲಿಮನಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net