ಪ್ರತಿಭಾ ಪುರಸ್ಕಾರ ಆಯೋಜನೆಗೆ ಸ್ಥಳಾವಕಾಶ ಮಾಡಿಕೊಡಿ

Make room for the talent awards ceremony.
Published on

ಇಂಡಿ: ವಿಜಯಪುರ ನಗರದಲ್ಲಿ ಜಿಲ್ಲಾ ಮೋಚಿಗಾರ ೇಮಾಭಿವೃದ್ಧಿ ಸಂದ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಆಯೋಜಿಸಲು ಸ್ಥಳಾವಕಾಶ ಮಾಡಿಕೊಡಬೇಕು ಎಂದುಒತ್ತಾಯಿಸಿ ತಹಸೀಲ್ದಾರ್​ ಧನಪಾಲಶೆಟ್ಟಿ ದೇವೂರ ಅವರಿಗೆ ಸಂದ ಪದಾಧಿಕಾರಿಗಳು ಸೋಮವಾರ ಮನವಿ ಸಲ್ಲಿಸಿದರು.

ಸಂದ ತಾಲೂಕು ಅಧ್ಯ ಬಸವರಾಜ್​ ಬಡದಾಳ ಮಾತನಾಡಿ, ಸಂದಿಂದ ಮಾರ್ಚ್​ 23ರಂದು ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಸಮಾರಂಭ ಆಚರಿಸಲು ನಿರ್ಧರಿಸಲಾಗಿದೆ. ಪೊಲೀಸ್​ ಪರೇಡ್​ ಮೈದಾನ ಹತ್ತಿರವಿರುವ ಹನುಮಂತ ದೇವರಗುಡಿ ಸಮುದಾಯ ಭವನದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಆದರೆ, ಟ್ರಸ್ಟ್​ನವರು ಕಾರ್ಯಕ್ರಮ ಮಾಡಲು ಸ್ಥಳ ಕೊಡುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿದ್ದಾರೆ. ಸ್ಥಳಾವಕಾಶ ಮಾಡಿಕೊಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಸಂದ ಕಾರ್ಯದರ್ಶಿ ಪ್ರಭಾಕರ ಮಂಡೋಲಿ, ಅನುಸೂಯ ಮದರಿ, ಚೇತನಕುಮಾರ ಮದರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net