ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿ

Development is our main goal.
ಬೂದಿಹಾಳ ತಾಂಡಾದಲ್ಲಿ ಜೆಡಿಎಸ್​ ಮುಖಂಡ ಸಚಿನಗೌಡ ಪಾಟೀಲ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ಬಸಲಿಂಗಯ್ಯ ಹಿರೇಮಠ, ಶಿವಲಿಂಗಯ್ಯ ಹಿರೇಮಠ, ಸದಪ್ಪಗೌಡ ರೋಡಗಿ, ರವಿಗೌಡ ಬಿರಾದಾರ ಇದ್ದರು.
Published on

ಹೂವಿನಹಿಪ್ಪರಗಿ: ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಕುಟುಂಬದ ಮುಖ್ಯ ಗುರಿ ಎಂದು ಜೆಡಿಎಸ್​ ಮುಖಂಡ ಸಚಿನಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ಬಸವನಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಉತ್ನಾಳ, ಉತ್ನಾಳ ತಾಂಡಾ ಹಾಗೂ ಬೂದಿಹಾಳ ತಾಂಡಾಗಳಲ್ಲಿ ಸಮಾಜ ಕಲ್ಯಾಣ ಇಲಾಖೆಯ ಪರಿಶಿಷ್ಟ ಜಾತಿ ಕಾಲನಿಯ (ಪ್ರಗತಿ ಕಾಲನಿಯಲ್ಲಿ) 1.50 ಕೋಟಿ ರೂ. ಅನುದಾನಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ನಮ್ಮ ಸಹೋದರ ರಾಜುಗೌಡ ವಿರೋಧ ಪದ ಶಾಸಕರಿದ್ದು, ಗ್ಯಾರಂಟಿಗಳ ಹಾವಳಿಯಲ್ಲೂ ಅನುದಾನ ತರುವ ಮೂಲಕ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತಿದ್ದಾರೆ ಎಂದರು.

ಮುಖಂಡರಾದ ಬಸಲಿಂಗಯ್ಯ ಹಿರೇಮಠ, ಶಿವಲಿಂಗಯ್ಯ ಹಿರೇಮಠ, ಸದಪ್ಪಗೌಡ ರೋಡಗಿ, ರವಿಗೌಡ ಬಿರಾದಾರ, ಸಿದ್ದ್ದನಗೌಡ ಬಿರಾದಾರ, ಆನಂದ ತಾಳಿಕೋಟಿ, ಪ್ರಶಾಂತ ಬಿರಾದಾರ, ಪ್ರಹ್ಲಾದ ತಳವಾರ, ನಬೀಸಾ ನದಾಫ್​, ಲಾಲು ಲಮಾಣಿ, ರಾಮಸಿಂಗ್​ ರಾಠೋಡ, ಲಾಲು ರಾಠೋಡ, ಶಂಕರ ರಾಠೋಡ, ನಾಮದೇವ ರಾಠೋಡ, ಮಕ್ಬುಲ ಆಲ್ದಾಳ, ಬಂದೇನವಾಜ ಕತ್ನಳ್ಳಿ, ಮೂಸಾ ಖಾಚಾಪುರ, ಮಾಳಪ್ಪ ಜೈನಾಪುರ, ಶರಣು ಹಾಲಶೆಟ್ಟಿ, ಶಿವು ಜೋಗಿ, ರವಿ ಉಪ್ಪಾರ, ಅಮೇತಪ್ಪ ಪೂಜಾರಿ, ರಾಜು ದಿಂಡವಾರ, ಕಾಂತು ರಾಠೋಡ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net