ಮಾನವೀಯ ಮೌಲ್ಯ ಬೆಳೆಸಿಕೊಳ್ಳಿ

Develop human values.
ಇಂಡಿ ತಾಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್​, ಕೆಜಿಎಸ್​ ಶಾಲೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭವನ್ನು ಅರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ ಉದ್ಘಾಟಿಸಿದರು. ನಾಗೇಶ ಹೆಗಡ್ಯಾಳ, ಸಂತೋಷ ಬಂಡೆ, ಅನೀಲ ಪತಂಗಿ ಇತರರಿದ್ದರು.
Published on

ಇಂಡಿ: ವಿದ್ಯಾರ್ಥಿಗಳು ಓದಿನ ಜತೆ ವ್ಯವಹಾರಿಕ ಜ್ಞಾನ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕೆಂದು ತಾಲೂಕು ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ ಹೇಳಿದರು.

ತಾಲೂಕಿನ ಹಿರೇರೂಗಿಯ ಕೆಬಿಎಸ್​, ಕೆಜಿಎಸ್​ ಶಾಲೆಯಲ್ಲಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ರ್ನಿದಿಷ್ಟ ಗುರಿ ಹೊಂದುವ ಜತೆಗೆ ಗುರುಭಕ್ತಿ, ಶ್ರದ್ಧೆ, ಆಸಕ್ತಿ, ಸ್ವಯಂ ಶಿಸ್ತಿನ ಗುಣ ಮೈಗೂಡಿಸಿಕೊಂಡು ಸಾಧನೆಯ ಮಾರ್ಗದಲ್ಲಿ ಸಾಗಬೇಕು ಎಂದು ಹೇಳಿದರು.

ಸರ್ವ ಕರಿಯರ್​ ಅಕಾಡೆಮಿ ಸಂಸ್ಥಾಪಕ ನಾಗೇಶ ಹೆಗಡ್ಯಾಳ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ನಾಗರಿಕರಾಗಲು ಸತತ ಪರಿಶ್ರಮ ಅಗತ್ಯ ಎಂದು ತಿಳಿಸಿದರು.

ಶಿಕ ಸಂತೋಷ ಬಂಡೆ ಮಾತನಾಡಿ, ಗುರು&ಹಿರಿಯರನ್ನು ಗೌರವಿಸುವ, ಪರಸ್ಪರ ಪ್ರೀತಿ, ಸ್ನೇಹ, ಸಹಬಾಳ್ವೆಯಿಂದ ಜೀವನ ಸಾಗಿಸುವ, ಸಕಾರಾತ್ಮಕ ಚಿಂತನೆ, ಸಮಾಜಸೇವೆ ಗುಣಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಕೆ.ಬಿ.ಎಸ್​.ಎಸ್​.ಡಿ.ಎಂ.ಸಿ ಅಧ್ಯ ಮಾಳಪ್ಪ ಪೂಜಾರಿ ಅಧ್ಯತೆ ವಹಿಸಿದ್ದರು. ಕೆಜಿಎಸ್​ ಎಸ್​.ಡಿ.ಎಂ.ಸಿ ಉಪಾಧ್ಯ ಪರಶುರಾಮ ಹೊಸಮನಿ ವಿವಿಧ ವಿಭಾಗದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿದರು.

ಮುಖ್ಯಶಿಕ ಅನೀಲ ಪತಂಗಿ, ಶಿಕಿ ಶ್ರದ್ಧಾ ಬಂಕಲಗಾ ವಾರ್ಷಿಕ ವರದಿ ವಾಚಿಸಿದರು.

ಎಸ್​.ಡಿ.ಎಂ.ಸಿ ಸದಸ್ಯರಾದ ಕಾಶೀನಾಥ ದಳವಾಯಿ, ಪಡೆವ್ವ ನಡುವಿನಮನಿ, ಶಾಲುಬಾಯಿ ಸೈನಸಾಕಳೆ, ಆರತಿ ಗೊರನಾಳ, ಮುಖ್ಯ ಶಿಕಿ ವಿ.ವೈ. ಪತ್ತಾರ ಹಾಗೂ ಶಿಕರಾದ ಎಸ್​.ಎಂ. ಪಂಚಮುಖಿ, ಸಾವಿತ್ರಿ ಸಂಗಮದ, ಎ್​.ಎ. ಹೊರ್ತಿ, ಎಸ್​.ಡಿ. ಬಿರಾದಾರ, ಎಸ್​.ಬಿ. ಕುಲಕರ್ಣಿ, ಮಲ್ಲಮ್ಮ ಗಿರಣಿವಡ್ಡರ, ಸುಮಿತ್ರಾ ನಂದಗೊಂಡ, ಶಾಂತೇಶ ಹಳಗುಣಕಿ, ಸುರೇಶ ದೊಡ್ಯಾಳಕರ, ಜೆ.ಸಿ. ಗುಣಕಿ, ಎಸ್​.ಎನ್​. ಡಂಗಿ, ಬಿ.ಎಸ್​. ಹೊಸೂರ, ಪ್ರಜ್ವಲ ಕುಲಕರ್ಣಿ, ಎಸ್​.ಆರ್​. ಚಾಳೇಕರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net