

ಕಲಕೇರಿ: ವಿದ್ಯಾರ್ಥಿಗಳು ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದುಗ್ರಾ.ಪಂ.ಸದಸ್ಯ ನಬಿಲಾಲ ನಾಯ್ಕೋಡಿ ಹೇಳಿದರು.
ಪೀಸ್ ಇಂಟರ್ನ್ಯಾಷನಲ್ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಏರ್ಪಡಿಸಿದ್ದ ವಿಜ್ಞಾನ ವಸ್ತು ಪ್ರದರ್ಶನದ ಅಧ್ಯತೆವಹಿಸಿ ಮಾತನಾಡಿದರು.
ವಸ್ತು ಪ್ರದರ್ಶನದ ನಿರ್ಣಾಯಕ ಶಿವಾನಂದ ಹರಿಜನ ಮಾತನಾಡಿ, ಓದಿನ ಜತೆ ಪಠ್ಯೇತರ ಚಟುವಟಿಕೆಯಲ್ಲಿ ಮಕ್ಕಳು ಆಸಕ್ತಿ ತೋರಬೇಕು ಎಂದರು.
ಮಾನವನ ಅಂಗ ರಚನೆ, ರಾಕೆಟ್ ಉಡಾವಣೆ, ಪರಿಸರ ರಣೆ, ಭೂಮಿ, ನೀರು, ವಾತಾವರಣ ಕಲುಷಿತವಾಗುವನ್ನು ತಪ್ಪಿಸುವ ಬಗೆ, ನೀರು ಸಂಗ್ರಹಣೆಯ ಅರಿವು ಕುರಿತು ವಿದ್ಯಾರ್ಥಿಗಳು ವಸ್ತು ಪ್ರದರ್ಶನ ಮೂಲಕ ಗಮನ ಸೆಳೆದರು.
ರಾಜಸಾಬ ಬಡೇರ, ರಮೇಶ ಕೌದಿ, ರವಿಕುಮಾರ ಚಟ್ಟರಕಿ, ದೇವಿಂದ್ರ ಬಡಿಗೇರ, ಬುಕ್ಕಪ್ಪ ಹರಿಜನ, ಕಾಶೀಮ ಬಿರಾದಾರ, ಬಂದೇನವಾಜ ಹೊನ್ನಳ್ಳಿ, ಹುಸೇನಬಾಶಾ ನದಾ, ರುದ್ರಸ್ವಾಮಿ ಚಿಕ್ಕಮಠ, ಬಾಬುಸಾಬ ತಾಳಿಕೋಟಿ, ಮಾಂತೇಶ ಬಡಿಗೇರ, ಶಿವಾನಂದ, ಚಾಂದಪಾಶಾ ಹವಲ್ದಾರ, ಶಾಕೀರ ನಾಯ್ಕೋಡಿ, ಚನ್ನಾರಡ್ಡಿ ಬಿರಾದಾರ, ಹಸನ ಬನ್ನೆಟ್ಟಿ, ಗುರುನಾಥ ಮಾಡಗಿ, ನಬಿ ಮುಳುಸಾವಳಗಿ, ಸಿದ್ದಮ್ಮ ಹಿರೇಮಠ, ಮಂಜುಳಾ ಚಿಕ್ಕಮಠ, ಸವಿತಾ ಸಾತಲಗಾಂವಿ, ಾತಿಮಾ ಪೀರಾಪುರ, ಶಮಶ್ಯಾದ ಹಳ್ಳದಮನಿ, ಪ್ರಮೀಳಾ ಮಾಡಗಿ, ಸುಜಾತಾ ಬಿಸೆ ಉಪಸ್ಥಿತರಿದ್ದರು.