ಸಿಸಿ ರಸ್ತೆ ನಿರ್ಮಾಣಕ್ಕೆ ಮನವಿ

Appeal for construction of CC road
ತಾಳಿಕೋಟೆ 4ನೇ ವಾರ್ಡ್​ನಲ್ಲಿ ಸಿಸಿ ರಸ್ತೆ ನಿರ್ಮಿಸುವಂತೆ ಆಗ್ರಹಿಸಿ ಬಡಾವಣೆ ನಾಗರಿಕರು ಪುರಸಭೆ ಮುಖ್ಯಾ-ಧಿಕಾರಿಗೆ ಮನವಿ ಸಲ್ಲಿಸಿದರು.
Published on

ತಾಳಿಕೋಟೆ : ಪಟ್ಟಣದ 4ನೇ ವಾರ್ಡ್​ನ ಟಿಎಲ್​ಕೆ ಮಾರ್ಟ್​(ಚೇತನ ವೃತ್ತ) ದಿಂದ ಬಂದಾಳ ಅವರ ಮನೆಯವರೆಗೆ ಸಿಸಿ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ವಾರ್ಡ್​ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಮೋಹನ್​ ಜಾಧವಗೆ ಮನವಿ ಸಲ್ಲಿಸಿದರು. ಬಡಾವಣೆಯಲ್ಲಿ ಯಾವುದೇ ರಸ್ತೆಗಳು ಅಭಿವೃದ್ಧಿಯಾಗಿಲ್ಲ. ಮಳೆಗಾಲದಲ್ಲಿ ಜನರು ಸಂಚರಿಸಲು ಪರದಾಡುವಂತಾಗಿದೆ. ಸಿಸಿ ರಸ್ತೆ ನಿರ್ಮಿಸುವ ಮೂಲಕ ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸಬೇಕೆಂದು ಒತ್ತಾಯಿಸಿದ್ದಾರೆ.

ಮುಖಂಡರಾದ ಎಚ್​.ವೈ. ಮಸರಕಲ್ಲ, ಪಿಂಟು ಮಹೇಂದ್ರಕರ, ನಾಗಪ್ಪ ಅಗಸರ, ಬಸವರಾಜ ಚೌದ್ರಿ, ಬಿ.ಆರ್​. ಪೊಲೀಸ್​ ಪಾಟೀಲ, ಎ.ಎಸ್​. ಇಟಗಿ, ಬಾಲಾಜಿ ವಿಜಾಪುರ, ಎಸ್​.ಬಿ. ಪಾಟೀಲ, ಎಸ್​.ಬಿ. ಚೌದ್ರಿ, ನಾನಾಗೌಡ ಬಸರಡ್ಡಿ, ಎ.ವೈ. ವಿಜಾಪುರ, ಐ.ವೈ. ವಿಜಾಪುರ, ಮಾನಪ್ಪ ಹಡಪದ, ಬಾಲಾಜಿ ಮೂಲಿಮನಿ, ಸುರೇಶ ವಾಲಿಕಾರ, ಲಿಂಗರಾಜ ಬಿರಾದಾರ, ಹರಿಸಿಂಗ್​ ಮೂಲಿಮನಿ, ಸಿದ್ದು ವಡವಡಗಿ, ಎ.ಬಿ. ಗೋನಾಳ, ಎ.ಐ. ಪತ್ತಾರ, ರಾಮನಗೌಡ ಬಿರಾದಾರ, ರವಿ ನಂದಿಹಾಳ, ಎಸ್​.ಜಿ. ಜಾಲವಾದಿ, ರವಿ ಸಜ್ಜನ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net